Home ಜಿಲ್ಲೆ ಕಲಬುರಗಿ ತಾಡತೆಗನೂರ: ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ

ತಾಡತೆಗನೂರ: ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ,ಏ.8-ತಾಲ್ಲೂಕಿನ ತಾಡತೆಗನೂರ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಪಾಳಾದ ಗುರುಪಾದಯ್ಯ ಸ್ವಾಮಿಗಳು ಮತ್ತು ಇಟಗಾದ ಶಿವಕುಮಾರ ಸ್ವಾಮಿಗಳು ಮಂಗಳವಾರ ಚಾಲನೆ ನೀಡಿದರು.
ಗುಂಡಯ್ಯ ಮುತ್ಯಾ ಅವರು ಪುರಾಣ ಕಾರ್ಯಕ್ರಮ ನಡೆಸಿಕೊಡವರು. ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಗಣಮುಖಿ, ಗೌರವಾಧ್ಯಕ್ಷ ಬಸಯ್ಯ ಸ್ವಾಮಿ, ಉಪಾಧ್ಯಕ್ಷ ಶಿವಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶರಣಬಸಪ್ಪ ನರೋಣಿ ಕಾರ್ಯಕ್ರಮ ನಿರೂಪಿಸಿದರು.
ತಾಡತೆಗನೂರ ಗ್ರಾಮ ಸುತ್ತಮುತ್ತಲ್ಲಿನ ಗ್ರಾಮಗಳಾದ ಹಾಗರಗುಂಡಗಿ, ಫಿರೋಜಾಬಾದ, ಹೊನ್ನಕಿರಣಗಿ, ಖಣದಾಳ, ಸರಡಗಿ, ಫಿರೋಜಾಬಾದ, ಸಿರನೂರ, ಪಾಣೆಗಾಂವ, ನಂದಿಕೂರ, ಕಣ್ಣಿ, ಮಿಣಜಗಿ, ಗರೂರ, ಕೌಲಗಾ ಮತ್ತು ಹೇರೂರ ಗ್ರಾಮಗಳ ಭಕ್ತಾಧಿಗಳು ಪುರಾಣ, ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.