Home ಜಿಲ್ಲೆ ಬೆಂಗಳೂರು ಶರಣ ಚಳುವಳಿ, ಕನ್ನಡ ನೆಲದ ಅಸ್ಮಿತೆ: ಚಂದ್ರಶೇಖರ ಹಡಪದ್

ಶರಣ ಚಳುವಳಿ, ಕನ್ನಡ ನೆಲದ ಅಸ್ಮಿತೆ: ಚಂದ್ರಶೇಖರ ಹಡಪದ್

ವಿಜಯಪುರ.ಫೆ೨೨: ಸತ್ಯ, ಶುದ್ಧಕಾಯಕ, ಸಾಮಾಜಿಕ ಸಾಂಸ್ಕೃತಿಕ ವಿಭಾಗೀಕರಣ ಮೀರಿದ ನೆಲೆ ಶರಣರದ್ದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರಹಡಪದ್ ಹೇಳಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲಾ, ಮಹಿಳಾ ಕದಳಿ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಮರುಳ ಶಂಕರ, ಡೋಹರಕಕ್ಕಯ್ಯ ಹಾಗೂ ಕಿಣ್ಣರಿ ಬೊಮ್ಮಯ್ಯ, ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


೧೨ ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಆರಂಭವಾದ ಶರಣ ಚಳುವಳಿ, ಕನ್ನಡ ನೆಲದ ಅಸ್ಮಿತೆ. ಇದಕ್ಕಿಂತ ಮಿಗಿಲಾದ ಕಾಯಕಕ್ರಾಂತಿ ಇನ್ನೊಂದಿಲ್ಲ. ಅನುಭವ ಮಂಟಪದ ಕಾಯಕಶೀಲ ತತ್ವದ ಪ್ರಭಾವ, ಅಪ್ಘಾನಿಸ್ತಾನದ ವರೆಗೂ ಹರಡಿತ್ತು. ಅದರ ಪ್ರಭಾವಕ್ಕೆ ಒಳಗಾಗಿ ಬಂದವರು ಮರುಳ ಶಂಕರ, ಚರ್ಮದ ಕಾಯಕದ ಡೊಹರಕಕ್ಕಯ್ಯ, ಅಕ್ಕಸಾಲಿಗ ಕಿಣ್ಣರಿ ಬೊಮ್ಮಯ್ಯ, ಶ್ರಮ ಸಿದ್ಧಾಂತದ ರೂವಾರಿಗಳು ವರ್ಣ, ವರ್ಗ ಮೀರಿದವರು. ಜಾತಿರೋಗವನ್ನು ಶಾಂತಿಯುತ ನಿರಾಕರಣೆ ಹಾಗೂ ಲಿಂಗಾಯತ ನೀತಿಯನ್ನು ಪರ್ಯಾಯ ಆಚರಣೆಗೆ ತಂದರು ಎಂದರು.


ಶರಣ ಚಿಂತಕ ರಾಷ್ಟ್ರೀಯ ಬಸವದಳದ ಖಜಾಂಚಿ ಮ.ಜಯದೇವ್ ಮಾತನಾಡಿ, ಶರಣರು ಕಾಯಕವನ್ನು ಶಿವ ಪೂಜೆ,ಜಪ,ತಪ ಎಂದು ನಡೆದವರು, ವೈಚಾರಿಕ ನಿಲುವು ಶರಣರ ಆದರ್ಶವಾಗಿತ್ತು. ಅಂತಹ ಶರಣರ ಹಾದಿಯಲ್ಲಿ ನಾವೂ ಸಹಾ ನಡೆದಾಗ ಬದುಕು ಧನ್ಯವಾಗುತ್ತದೆ ಎಂದರು.


ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ, ಮಂಜುಳಾಚಂದ್ರಮೋಹನ್, ಕದಳಿ ವೇದಿಕೆಯ ರೂಪಭಾಸ್ಕರ್, ದೀಪಾ, ಭಾರತಿ, ಆಶಾ, ಸೌಮ್ಯ, ಶ್ವೇತಾ, ಚೈತ್ರಾ, ಕು.ನಿವೇದಿತಾ ಜಿಲ್ಲ ಕಾರ್ಯದರ್ಶಿ ಮುನಿರಾಜು, ಕದಳಿ ವೇದಿಕೆ ಸದಸ್ಯರು ಹಾಜರಿದ್ದರು.