
ಕಾರ್‍ಯಕರ್ತರ ಒತ್ತಡ
ಪುಣೆ,ಜ,೩೦- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಉಂಟಾದ ರಾಜಕೀಯ ನಿರ್ವಾತ ತುಂಬಲು ಪವಾರ್ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ರಾಜ್ಯ ರಾಜಕೀಯಕ್ಕೆ ಮರಳಬೇಕು ಜೊತೆಗೆ ಉಪ ಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳಬೇಕು ಎಂದು ಎನ್‌ಸಿಪಿ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಮೂಲಕ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಕರ್ತರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದು ಎನ್‌ಸಿಪಿಯ ನಾಯಕರು ಮತ್ತು ಹಿರಿಯ ಕಾರ್ಯಕರ್ತರು ಒತ್ತಡ ಹೇರಿದ್ದಾರೆ.
೬೨ ವರ್ಷದ ಸುನೇತ್ರಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂತಾಪ ಸೂಚಿಸಿದರು ಮತ್ತು ಮಹಾಯುತಿ ಸರ್ಕಾರ ಸೇರಲು ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣ ಮುನ್ನಡೆಸುವಂತೆ ಒತ್ತಾಯಿಸಿದ್ದಾರೆ.
ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಮುಖ್ಯಸ್ಥ ಸುನಿಲ್ ತತ್ಕರೆ ಮತ್ತು ಕ್ಯಾಬಿನೆಟ್ ಸಚಿವ ಛಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಚಿವ ಮತ್ತು ಅಜಿತ್ ಪವಾರ್ ಅವರ ಆಪ್ತ ನರಹರಿ ಜಿರ್ವಾಲ್ ಅವರನ್ನು ಸುನೇತ್ರ ಪವಾರ್ ಅವರು ರಾಜ್ಯ ರಾಜಕೀಯಕ್ಕೆ ಬರುವ ಜೊತೆಗೆ ಉಪ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಸುನೇತ್ರಾ ಅವರು ಇರುವುದನ್ನು ಬಯಸುತ್ತಾರೆ. ಹೀಗಾಗಿ ಈ ಅಭಿಪ್ರಾಯ ಬೆಂಬಲಿಸುತ್ತೇನೆ” ಪಕ್ಷದ ಹಿರಿಯ ಸದಸ್ಯರೊಂದಿಗೆ ಈ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಶೀಘ್ರದಲ್ಲೇ ಮುಂಬೈನಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ, ನಾಯಕನಿಲ್ಲದ ಪಕ್ಷಕ್ಕೆ ಶೀಘ್ರ ನಾಯಕತ್ವ ವಹಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಬಾರಾಮತಿಯಲ್ಲಿ, ಪಕ್ಷದ ಪದಾಧಿಕಾರಿಗಳು ಅಜಿತ್ ಅವರ ಪುತ್ರರಾದ ಪಾರ್ಥ್ ಅಥವಾ ಜಯ್ ಅವರ ನಿಧನದಿಂದ ಉಂಟಾದ ಬಾರಾಮತಿ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತಾರೆ ಎಂದಿದ್ದಾರೆ.
ಎನ್ ಸಿಪಿ ಬಣಗಳು ವಿಲೀನವಾಗಲು ವಿಫಲರಾದರೆ ಸುನೇತ್ರಾ ಅವರು ಎನ್ ಸಿಪಿ ಪಕ್ಷವನ್ನು ಮುನ್ನೆಡೆಸಬೇಕು ಎನ್ನುವ ಆಗ್ರಹವೂ ಕೇಳಿಬಂದಿದೆ.
ಇಲ್ಲಿಯವರೆಗೆ ಪಕ್ಷದ ಕಾರ್ಯಚಟುವಟಿಕೆಗಳು ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರಿಯಾ ಸುಳೆ ಅವರ ಸುತ್ತ ಸುತ್ತುತ್ತಿದ್ದವು. ಈಗ ಅಜಿತ್ ಅವರ ಅಕಾಲಿಕ ಮರಣದೊಂದಿಗೆ, ಪಕ್ಷದ ಅನೇಕ ಹಿರಿಯರು ಮತ್ತು ತಳಮಟ್ಟದ ಕಾರ್ಯಕರ್ತರು ಅವರ ಪತ್ನಿ ಸುನೇತ್ರಾ ಮಾತ್ರ ಅವರ ಸ್ಥಾನವನ್ನು ವಹಿಸಿಕೊಳ್ಳಬಹುದು ಎಂದು ಆಗ್ರಹಿಸಿದ್ದಾರೆ.
ಅಜಿತ್ ಪವಾರ್ ಅವರ ಚಿಕ್ಕಪ್ಪ ಶರದ್ ಮತ್ತು ಸೋದರಸಂಬಂಧಿ ಸುಪ್ರಿಯಾ ಅವರು ಪ್ರತಿಸ್ಪರ್ಧಿ ಎನ್‌ಸಿಪಿ ಬಣಗಳ ಪುನರ್ಮಿಲನದತ್ತ ಸಾಗುತ್ತಾರೆಯೇ ಎಂದು ಇತರ ಹಿರಿಯ ಕಾರ್ಯಕರ್ತರು ಕಾವಲು ಕಾಯುತ್ತಿದ್ದಾರೆ. ವಿಲೀನವು ಮಹಾರಾಷ್ಟ್ರದ ರಾಜಕೀಯ ನಕ್ಷೆ ಬದಲಿಸಬಹುದು ಎನ್ನುವ ವಿಶ್ವಾಸದಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ.



























