
ಬೀದರ,ಜೂ.23: ಹಳೇ ನಗರದಲ್ಲಿರುವ ಕಸ್ತೂರೀಬಾಯಿ ಟ್ರಸ್ಟ್ ವತಿಯಿಂದ ಕಳೆದ ತಿಂಗಳು ಹಮ್ಮಿಗೊಂಡಿದ್ದ ನಿಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶ್ವಕರ್ಮ ಶಾಲೆ (ಭಾವಸಾರ ಸಮಾಜ)ಯಲ್ಲಿ ಪುರಸ್ಕಾರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೇಶ ಢಗೆ ವಹಿಸಿದರು. ಮುಖ್ಯ ಅತಿಥಿಯಾಗಿ ಸಾಯಿಸ್ಫೂರ್ತಿ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕಿ ನೀಲಾ ತಳ್ಳಳ್ಳಿ ವಹಿಸಿದರು. ಅತಿಥಿಯಾಗಿ ಬ್ರಹ್ಮಕುಮಾರಿ ವಿದ್ಯಾಲಯದ ಕುಮಾರ ಜಗದೇಶಚಂದ್ರ ಗರ್ಜೆ ಮತ್ತು ಟ್ರಸ್ಟಿನ ಖಜಾಂಚಿ ಶಿವಕುಮಾರ ಮಾಳೆಗಾಂವ ವಹಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರು ಆಂಗ್ಲ ಭಾಷೆ: ಪ್ರಥಮ ಸ್ಥಾನ ಕೀರ್ತಿ ಸುಧಾಕರ, ದ್ವಿತೀಯ ಸ್ಥಾನ ಶ್ರೇಯಾ ಹಣಮಂತ ಹಾಗೂ ತೃತೀಯ ಸ್ಥಾನ ಸಂಗಮೇಶ ಸಂತೋಷ.
ಹಿಂದಿ ಭಾಷೆ:
ಪ್ರಥಮ ಸ್ಥಾನ ಸೀಮಾ ಸುನಿಲ, ದ್ವಿತೀಯ ಸ್ಥಾನ ದೇವಿಕಾ ಸುನಿಲ ಹಾಗೂ ತೃತೀಯ ಸ್ಥಾನ ಮುಕುಂದ ಗಂಗಾಧರ ತಾಂದಳೆ.ಕನ್ನಡ ಭಾಷೆ: ಪ್ರಥಮ ಸ್ಥಾನ ದೀಪಿಕಾ ಸೋಮಶೇಖರ, ದ್ವಿತೀಯ ಸ್ಥಾನ ಪ್ರೀತಿ ನೀಲಕಂಠ ಹಾಗೂ ತೃತೀಯ ಸ್ಥಾನ ಸಹಾನ ಸೋಮನಾಥ.ಸಾಮಾನ್ಯ ಪುರಸ್ಕøತರು: ವೆನಾಲಾ ವೆಂಕಟೇಶ, ಪ್ರತೀಕ ಗಂಗಾಧರ, ನವ್ಯಾ ನೇಮಿನಾಥ, ಖುಷಿ ಸುನಿಲ ಉಬಾಳೆ ಮತ್ತು ವಿರೇಶ ಲಕ್ಷ್ಮಿಕಾಂತ.
ಕಾರ್ಯಕ್ರಮದ ಸಂಚಾಲನೆಯನ್ನು ವಿದ್ಯಾರ್ಥಿನಿ ವೈಷ್ಣವಿ ಟಿಳೇಕರ ವಹಿಸಿದರು