ಪ್ರಿಸಿಶನ್ ಕ್ಯಾಮ್‍ಶಾಫ್ಟ್ ಇಂಡಿಯಾ ಲಿಮಿಟೆಡ್‍ಗೆ ವಿದ್ಯಾರ್ಥಿಗಳ ಆಯ್ಕೆ

ವಿಜಯಪುರ, ಜ. 30:ಕ್ಯಾಂಪಸ್ ಡ್ರೈವ್‍ನಲ್ಲಿ 24 ವಿದ್ಯಾರ್ಥಿಗಳು ಪ್ರಿಸಿಶನ್ ಕ್ಯಾಮ್‍ಶಾಫ್ಟ್ ಇಂಡಿಯಾ ಲಿಮಿಟೆಡ್‍ಗೆ ಆಯ್ಕೆಯಾಗಿದ್ದಾರೆ.
ಬಿಎಲ್‍ಡಿಇ ಸಂಸ್ಥೆ ಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಜನವರಿ 20 ರಂದು ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿತು. ಒಟ್ಟು 24 ವಿದ್ಯಾರ್ಥಿಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ -18 ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ – 06 ವಿದ್ಯಾರ್ಥಿಗಳು ಪ್ರಿಸಿಶನ್ ಕ್ಯಾಮ್‍ಶಾಫ್ಟ್ ಇಂಡಿಯಾ ಲಿಮಿಟೆಡ್‍ನಿಂದ ಮೆಷಿನ್ ಶಾಪ್ ಎಂಜಿನಿಯರ್‍ಗಳಾಗಿ ನೇಮಕಗೊಂಡಿದ್ದಾರೆ, ಪ್ರತಿಯೊಬ್ಬರಿಗೂ ?3.24 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆಯಲಿದ್ದಾರೆ .
ಈ ಘೋಷಣೆಯನ್ನು ಪ್ರಾಂಶುಪಾಲ ಡಾ. ಮಂಜುನಾಥ ಪಿ. ಮತ್ತು ತರಬೇತಿ ಮತ್ತು ನಿಯೋಜನೆ ಅಧಿಕಾರಿ ಪೆÇ್ರ. ಪ್ರಶಾಂತ ಪಾಟೀಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಾವಿದ್ಯಾಲಯವು ಅರ್ಹ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದಲ್ಲಿ ಓದುವ ವೇಳೆಯಲ್ಲಿ ಸೂಕ್ತ ಉದ್ಯೋಗ ದೊರಕಿಸಿ ಕೊಡುವಲ್ಲಿ ಯಶಸ್ವಿ ಆಗಿದೆ. ವಿದ್ಯಾರ್ಥಿಗಳಿಗೆ ಪರಿಣಿತರಿಂದ ತರಬೇತಿಗೆ ಕೊಡುವ ವ್ಯವಸ್ತೆ ಮಾಡಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಪ್ರಮುಖ ಕಂಪನಿಗಳಲ್ಲಿ ಉದ್ಯೋಗಕೆ ನಿಯೋಜನೆ ಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.