ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಜಾಗರಣಾ ಜಾಗೃತಿ ಸಪ್ತಾಹದ ಆಚರಣೆಯ ಅಂಗವಾಗಿ ವಾಕಥಾನ್

ಕಲಬುರಗಿ;ಅ.27: ಕಲಬುರಗಿ ನಗರದಲ್ಲಿ, ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯವು ಭಾನುವಾರ ಆಯೋಜಿಸಿದ್ದ ಜಾಗರಣಾ ಜಾಗೃತಿ ಸಪ್ತಾಹದ ಆಚರಣೆಯ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯ ಮತ್ತು ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಾಲ್ನಡಿಗೆಯ ವಾಕಥಾನ್ ನಡೆಸಿದರು. ಎಲ್ಲಾ ಹಂತಗಳಲ್ಲಿ ಭ್ರμÁ್ಟಚಾರವನ್ನು ತಡೆಗಟ್ಟಲು ಮತ್ತು ಸಮಾಜದ ಮಹಿಳೆಯರು ಹಾಗೂ ದುರ್ಬಲ ವರ್ಗದ ಜನರ ಹಕ್ಕುಗಳ ರಕ್ಷಣೆಗೆ ಜಾಗರಣೆ ಅಗತ್ಯ ಎಂಬ ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗಿದರು.

ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ ಅವರು ವಾಕಥಾನ್‍ಗೆ ಚಾಲನೆ ನೀಡಿದರು.

ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸಿ ಮತ್ತು ಎಲ್ಲಾ ಹಂತಗಳಲ್ಲಿ ಭ್ರμÁ್ಟಚಾರದ ವಿರುದ್ಧ ಜಾಗರಣೆ ಅಗತ್ಯ ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಕಲಬುರಗಿ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಭ್ರμÁ್ಟಚಾರದ ವಿರುದ್ಧ ಜಾಗರಣೆ ವಹಿಸುವುದಾಗಿ ಮತ್ತು ಸಮಾಜದ ಮಹಿಳೆಯರು ಮತ್ತು ದುರ್ಬಲ ವರ್ಗದ ಜನರು ಹಕ್ಕುಗಳನ್ನು ರಕ್ಷಿಸುವುದಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಶರಣಬಸವೇಶ್ವರ ಸಂಸ್ಥಾನದಲ್ಲಿ ತಮ್ಮ ವಾಕಥಾನ್ ಕೊನೆಗೊಳಿಸಿದರು.