
ಕಲಬುರಗಿ,ಅ.29: ಕಲಬುರಗಿ ಉತ್ತರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹೇಶ ಅಂಬಾಜಿ ತ್ರಿವಿಧ ಜಿಗಿತ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ,ರಾಣಿ ಶಿವಕುಮಾರ 400 ಮೀ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ,ಭೂಮಿಕಾ ದೇವಿದಾಸ ತ್ರಿವಿಧ ಜಿಗಿತದಲ್ಲಿ ಪ್ರಥಮ,ಭವಾನಿ ಸಂತೋಷ ದ್ವಿತೀಯ ಹಾಗೂ ರಾಣಿ,ಭವಾನಿ,ಭೂಮಿಕಾ,ಭವಾನಿ ತಂಡ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಶಿಲ್ಪಾ.ಆರ್ ವಸ್ತ್ರದ,ಮುಖ್ಯಗುರು ಮಲಶೆಟ್ಟೆಪ್ಪ ಇಂಡಿ,ದೈಹಿಕ ಶಿಕ್ಷಕ ಗುರಣ್ಣ ಮುದ್ದಾನವರ ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.






























