ಕಥಾ ಪ್ರವಚನ ಕಾರ್ಯಕ್ರಮ

ಸತ್ತುರು,ಅ29: ರಾಮಾಯಣದ ಏಳು ಕಾಂಡಗಳಲ್ಲಿರುವ ಕೊನೆಯ ಕಾಂಡ ಉತ್ತರಕಾಂಡ. ಎಲ್ಲ ಸಾಧಕರಿಗೂ ಅವರವರ ಜ್ಞಾನ, ಭಕ್ತಿ ಸಾಧನೆಗಳ ಅನುಸಾರ, ಫಲ ನೀಡುವ ಹಾಗೂ ಎಲ್ಲಾ ಆಕ್ಷೇಪಗಳಿಗೂ ಉತ್ತರ ನೀಡಿದ ಕಾಂಡ ಉತ್ತರ ಕಾಂಡ ಎಂದು ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿ ಅವರು ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ “ರಾಮಾಯಣದ ಉತ್ತರ ಕಾಂಡದ ಕಥಾ ಪ್ರವಚನದಲ್ಲಿ” ಭಾಗವಹಿಸಿ ಮಾತನಾಡುತ್ತಾ ರಾಮಾಯಣದ ಏಳು ಖಂಡಗಳು ಆಧ್ಯಾತ್ಮಿಕ ಸಾಧಕರು ಏರುವ ಏಳು ಮೆಟ್ಟಲಿಗಳು ಸಾಧನದ ಸೋಪಾನಗಳು ಸಾಧಿಸಬೇಕಾದರೆ ಗುಣಗಳು ಮತ್ತು ವೇದದ ಏಳು ಸಂದೇಶಗಳು ಕಾಂಡದ ಬೀಜವೇ ಏಳು ಸಾಂಖ್ಯಾಕವಾಗಿದೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಡಾ. ಶ್ರೀನಾಥ, ಕೃಷ್ಣ ಹುನಗುಂದ, ಅನಿಲ ಹರಿಹರ, ನಾಗೇಶ ಕುಲಕರ್ಣಿ ಗುರುನಾಥ ಸರದೇಶಮುಖ, ಆನಂದ ದೇಶಪಾಂಡೆ, ತಂಗೋಡ ವಿಲಾಸ್ ಜೋಶಿ, ಅದ್ವೈತ್ ಸರ್ದೇಶ್ಮುಖ, ಜಯಂತ ಶ್ರೀನಾಥ, ಹನುಮಂತ ಪುರಾಣಿಕ, ಸಂಜೀವ ಜೋಶಿ, ಬೆಟಗೇರಿ, ಬಹದ್ದೂರ ದೇಸಾಯಿ, ಪಟ್ಟಣಕುಡಿ, ವೆಂಕಟೇಶ ಕುಲಕರ್ಣಿ, ಎಲ್. ವಿ.ಜೋಶಿ, ಕಾಂಗೋ, ಗೋಪಾಲಾಚಾರ್ಯ ಹರಿಹರ, ಎಸ್‍ಎಂ ಜೋಶಿ, ಗಿರೀಶ ಪಾಟೀಲ, ಪಾಂಡುರಂಗ ಕುಲಕರ್ಣಿ, ಪ್ರಮೋದ ಸಿರುಗುಪ್ಪಿ, ಡಾ. ರವಿ ಧುಮ್ಮವಾಡ, ಕಲಕೋಟಿ, ಪ್ರಶಾಂತ ಕುಲಕರ್ಣಿ, ಉದಯ ದೇಶಪಾಂಡೆ, ಮುಂತಾದವರು ಉಪಸ್ಥಿತರಿದ್ದರು.