
ತಾಳಿಕೋಟೆ :ಡಿ.೮: ಕ್ರೀಡೆಯಲ್ಲಿ ಸೋಲು ಗೆಲವು ಎಂಬುದು ಇದ್ದೇ ಇರುತ್ತದೆ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಸೋಲು ಗೆಲವನ್ನು ಸಮಾನವಾಗಿ ಸ್ವಿಕರಿಸುವದರೊಂದಿಗೆ ಕ್ರೀಡೆಗೆ ಉತ್ತೇಜನ ನೀಡುವಂತಾಗಬೇಕೆAದು ಪುರಸಭಾ ಮಾಜಿ ಅಧ್ಯಕ್ಷ ಧಶರಥ್‌ಸಿಂಗ್ ಮನಗೂಳಿ ಅವರು ಹೇಳಿದರು.
ಶನಿವಾರರಂದು ಪಟ್ಟಣದ ಬಿಸ್ತಿಗಲ್ಲಿ ಬಡಾವಣೆಯಲ್ಲಿ ಜಮಾತ್ ವತಿಯಿಂದ ಹಮ್ಮಿಕೊಂಡ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಪ್ರಥಮ ಭಹುಮಾನ ೧೦ ಸಾವಿರ ರೂ. ಘೋಷಿಸಿ ಮಾತನಾಡಿದ ಅವರು ಕ್ರೀಡಾ ಮನೋಭಾವನೆ ಎಂಬುದು ಪ್ರತಿಯೊಬ್ಬರಲ್ಲಿಯೂ ಬರಬೇಕಾಗಿದೆ ಕ್ರೀಡೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಶೈಕ್ಷಣಿಕವಾಗಿ ಓದಿದ ಎಲ್ಲ ವಿಷಯಗಳು ಜ್ಞಾಪಕದಲ್ಲಿ ಉಳಿದುಕೊಳ್ಳಲಿದೆ ಅಲ್ಲದೇ ಕ್ರೀಡೆ ದೈಹಿಕವಾಗಿ ಮನುಷ್ಯನನ್ನು ಭದ್ರಗೊಳಿಸುತ್ತದೆ ಎಂದರು.
೩ ದಿನಗಳ ವರೆಗೆ ನಡೆಯಲಿರುವ ಈ ಕ್ರೀಕೇಟ್ ಪಂದ್ಯಾವಳಿಯಲ್ಲಿ ನೋಯಾನ್ ಟೈಟನ್ಸ್, ಸೇವನ್ ಸ್ಟಾರ್, ಅಲ್ಟರ್ ಇಗೋ, ಬಾಂಡ್ ರೇಂಜರ್ಸ್, ಪಾವರ್ ರೇಂಜರ್ಸ್ ಹಾಗೂ ಟ್ರೋಫಿ ಫೈಟರ್ಸ್ ಹೀಗೆ ಒಟ್ಟು ಆರು ತಂಡಗಳು ಭಾಗವಹಿಸಿವೆ.
ಈ ಸಮಯದಲ್ಲಿ ಸಂಘಟಿಕರು, ಮುಖಂಡರುಗಳು, ಕ್ರೀಡಾಭಿಮಾನಿಗಳು, ಕ್ರೀಡಾ ತಂಡದವರು ಉಪಸ್ಥಿತರಿದ್ದರು.
























