
ಕಲಬುರಗಿ:ಮಾ.16: ತಮಿಳುನಾಡಿನ ವೆಲ್ಲೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸಂಸ್ಥೆಯಲ್ಲಿ ಮಾ. 17 ರಿಂದ ಮಾ. 21, 2026 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್‍ಬಾಲ್ ಪುರುಷ ಕ್ರೀಡಾ ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಹ್ಯಾಂಡ್‍ಬಾಲ್ ತಂಡ ಭಾಗವಹಿಸಲಿದೆ.
ತಂಡದ ನಾಯಕ ಪ್ರಕಾಶ ಹಾಗೂ ಸದಸ್ಯರಾದ ಪ್ರಜ್ವಲ್, ಆದತ್ಯ, ಸೋಹಾಂ, ಸನಿಕುಮಾರ, ನಿತೀನ್, ಪ್ರಜ್ವಲ್, ಅಮೋಘ ಸಿದ್ದ, ಆಷಿಪ್ ಶಹಾ, ಮಾದೇಶ, ಶಿವರಾಜ ಕಾರ್ತಿಕ ಭಾಗವಹಿಸಲಿದ್ದಾರೆ. ತಂಡದ ವ್ಯವಸ್ಥಾಪಕ/ತರಬೇತಿದಾರರಾಗಿ ಎಂಜೆಪಿ ಆಟ್ರ್ಸ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಡಾ. ಮಧುಸೂದನ ರೆಡ್ಡಿ ತೆರಳುವರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಹನುಮಂತ ಎಸ್. ಜಂಗೆ, ಯೋಗ ತಾಂತ್ರಿಕ ಸಹಾಯಕ ಡಾ. ಚಂದ್ರಕಾಂತ ಬಿರಾದಾರ, ಪ್ರಶಾಂತ್ ಕುಮಾರ್ ಡಿ, ಅರುಣ್ ಕುಮಾರ್ ಎಚ್ ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.



























