
ಯಾದಗಿರಿ:ಜ.೨೯:ಯಾದಗಿರಿಯಿಂದ ಹೈದರಾಬಾದ್‌ಗೆ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ, ಹೈವೇ ಡಾಬಾದ ಮುಂಭಾಗದಲ್ಲಿ ಉಂಟಾಗಿದ್ದ ದೊಡ್ಡ ರಸ್ತೆ ಗುಂಡಿಗಳಿAದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕು. ಲಲಿತಾ ಅನಪುರ ಅವರು ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ಗುಂಡಿಗಳಿAದ ಅಪಘಾತಗಳ ಆತಂಕ ಹೆಚ್ಚಾಗಿದ್ದು, ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಗಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ರಸ್ತೆ ಗುಂಡಿ ಮುಚ್ಚುವ ಹಾಗೂ ರಸ್ತೆ ಸಮತಟ್ಟು ಮಾಡುವ ಕಾರ್ಯವನ್ನು ಕೈಗೊಳ್ಳಲಾಯಿತು. ಅವರ ಮಾರ್ಗದರ್ಶನದಲ್ಲಿ ಸುಧಾರಣಾ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿ, ಇದೀಗ ಸಾರ್ವಜನಿಕರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರ ಸಾಧ್ಯವಾಗಿದೆ.
ಅಪಘಾತಗಳು ಸಂಭವಿಸದAತೆ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಂಬAಧಪಟ್ಟ ಇಲಾಖೆಯವರಿಗೆ ಕು. ಲಲಿತಾ ಅನಪುರ ಅವರು ಸೂಚಿಸಿದರು. ಸಾರ್ವಜನಿಕರ ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸದಾ ಸ್ಪಂದಿಸುವ ತಮ್ಮ ಬದ್ಧತೆಯನ್ನು ಈ ಮೂಲಕ ಅವರು ಪುನರುಚ್ಚರಿಸಿದರು.
ರಸ್ತೆ ಸುಧಾರಣಾ ಕಾರ್ಯದಿಂದಾಗಿ ಸ್ಥಳೀಯರು ಹಾಗೂ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಸಮಯೋಚಿತ ಕ್ರಮಕ್ಕೆ ಕು. ಲಲಿತಾ ಅನಪುರ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗಪ್ಪ ಗಚ್ಚಿನಮನಿ, ಶರಣು ಎಲೇರಿ, ವಿಶ್ವನಾಥ್ ಅಬ್ಬೆತೂಮಕುರ, ಶರಣು ಪಟ್ಟೆದಾರ್, ಯೇಸುಮಿತ್ರ ಮರ್ಲಿಂಗ ಜಿನಕೇರಿ, ಚೇತನ್ ವಂಕಸAಬರ, ಕಾಶಿನಾಥ್ ಕೋಟಿಮನಿ, ಹನುಮಂತ ಮುಂಡರಿಗಿ, ಹಣಮಂತ ಮೇಸ್ತ್ರಿ ಮುಂಡರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
























