
ಕಲಬುರಗಿ,ಮಾ.15: ತಾಲೂಕಿನ ತಾಡತೆಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡೈರಿ ಡೇ ಐಸಕ್ರೀಮ್ ಮತ್ತು ಯುವ ಬೆಂಗಳೂರು ಟ್ರಸ್ಟ್ ಸಹಯೋಗದಲ್ಲಿ ಸ್ಮಾರ್ಟ ಬೋರ್ಡ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ಬೆಂಗಳೂರು ಟ್ರಸ್ಟ್‍ನ ಸಂಸ್ಥಾಪಕ ಜಿ. ಕಿರಣ ಸಾಗರ ನೇತೃತ್ವದಲ್ಲಿ ಟ್ರಸ್ಟ್‍ನ ಅಧ್ಯಕ್ಷ ಬಿ.ವಿ. ಸುನೀಲ ಅವರು ಸ್ಮಾರ್ಟಬೋರ್ಡ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಶಿವಕುಮಾರ ಬಿ. ಹಿರೇಮಠ ವಹಿಸಿದ್ದರು.
ಬಿ.ವಿ. ಸುನೀಲ ಮಾತನಾಡಿ, ನಮ್ಮ ಸಂಸ್ಥೆಯಿಂದ ಈಗಾಗಲೇ 300ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ಸ್ಮಾರ್ಟ ಬೋರ್ಡಗಳನ್ನು ವಿತರಿಸಲಾಗಿದೆ ಎಂದರುಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ನಂತರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಷ್ಯವೇತನ ಮತ್ತು ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣಕ್ಕೆ ತಗಲುವ ವೆಚ್ಚ ಭರಿಸಲಾಗುವುದೆಂದರು.ಕಾರ್ಯಕ್ರಮದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷ ಅಣ್ಣರಾವ ಗಣಮುಖಿ, ಅರ್ಜುನ, ಸುನೀಲ, ರೇಣುಕಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀದೇವಿ ನಿರೂಪಿಸಿದರು.ಶಾರದಾ ದೇಸಾಯಿ ಸ್ವಾಗತಿಸಿದರು. ಪುಷ್ಪಲತಾ ವಂದಿಸಿದರು.



























