15 ರಂದು ಸರ್. ಎಂ. ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

ಕಲಬುರಗಿ,ಸೆ.13: ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಸೆ.15 ರಂದು ನಗರದಲ್ಲಿ
ಕನ್ಸಲಟಿಂಗ್ ಸಿವಿಲ್ ಇಂಜಿನಿಯಸ ಅಸೋಸಿಯೇಷನ್ ವತಿಯಿಂದ ಇಂಜನಿಯರ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಅಂದು ವಾಕಾಥಾನ್ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ಎಂದು
ಕನ್ಸಲಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೆ ಎಚ್ ಮಿಶ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14 ರಂದು ವಾಕಾಥಾನ್ ಬೆಳಿಗ್ಗೆ 7 ಗಂಟೆಗೆ ಜಗತ ವೃತ್ತದಿಂದ ವಿಶ್ವೇಶ್ವರಯ್ಯ ಭವನದವರಗೆ ವಾಕಥಾನ್ ಆಯೋಜಿಸಲಾಗಿದೆ. ಅದರಲ್ಲಿ ಮುಖ್ಯ ಅತಿಥಿ ಯಾಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ, ಅತಿಥಿ ಗಳಾಗಿ ಮಹಾನಗರ ಪಾಲಿಕೆ ಆಯುಕ್ತ ಶಿಂಧೆ ಅವಿನಾಶ ಸಂಜೀವನ್, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ ಶರಣಪ್ಪ ಸುಲಗಂಟೆ ಅವರು ಆಗಮಿಸಿ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭ ದಲ್ಲಿ ಎಸ್ ಆರ್ ಜೆ ಸ್ಟೀಲ್ ಕಂಪನಿ ವಲಯ ಮಾರುಕಟ್ಟೆ ಅಧಿಕಾರಿ ಅಂತೇಶ್ವರ ಧನುರೆ ಹಾಗೂ ಅಲ್ಟ್ರಾಟೆಕ್ಟ್ ಸಿಮೆಂಟ್ ನ ವ್ಯವಸ್ಥಾಪಕ ಗಿರೀಶ ಸವನ್ನೂರ್ ಉಪಸ್ಥಿತರಿರಲಿದ್ದಾರೆ
15 ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವೇಶ್ವರಯ್ಯ ಭವನದಲ್ಲಿ ರಕ್ತ ದಾನ ಶಿಬಿರ ಆಯೋಜನೆ ಮಾಡಲಾಗಿದೆ ಅದರಲ್ಲಿ ಮುಖ್ಯ ಅತಿಥಿ ಯಾಗಿ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಛೇರ್ಮನ್ ಶ್ರೀಧರ ಪಾಂಡೆ ಪಾಲ್ಗೊಳ್ಳಲಿದ್ದಾರೆ. ಕಲಬುರ್ಗಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಳೆದ 25 ವರ್ಷದಿಂದ ಅನೇಕ ಸಾಮಾಜಿಕ ಕಾರ್ಯಕ್ರಮ ಆಯೋಜನೆ ಮಾಡುತ್ತ ಬಂದಿದೆ.ಈ ಬಾರಿ ಸಾಮಾಜಿಕ ಕಾರ್ಯಕ್ರಮದಡಿ ಅಕಾಲಿಕ ಮರಣ ಹೊಂದಿದ ನಮ್ಮ ಸಂಸ್ಥೆಯ ಇಬ್ಬರೂ ಹಿರಿಯ ಇಂಜಿನಿಯರ್ಸ್ ಕುಟುಂಬ ದವರಿಗೆ ಸಹಾಯಹಸ್ತ ನೀಡುಲಾಗುತ್ತದೆ.ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳಾದ ಅನಿಲಕುಮಾರ ಎಸ್ ಗಂಗಾಣೆ ,ಮನೀಶ್ ವೈಕುಂಠ,ಮೊ.ಅಬ್ದುಲ್ಲಾ ಬಿಲೀಫ್, ಮುರಳಿಧರ ಜಿ ಕರಲಗಿಕರ್ ಇದ್ದರು.