
ಬೀದರ್:ಅ.20: ತಾಲೂಕಿನ ರಾಜೀವ್ ಗಾಂಧಿ ಪದವಿ ಪೂರ್ವ ಆವರಣದಲ್ಲಿ ಖರ್ಗೆ ಶಾರದಾಬಾಯಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಜನತಾ ಪ್ರವೀಣ್ ಶಿಕ್ಷಣ ಸಂಸ್ಥೆ ಹಾಗೂ ಖರ್ಗೆ ಮಾಣಿಕರಾವ್ ಮೆಮೊರಿಯಲ್ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ “ಸರಳ ಸಾಮೂಹಿಕ ವಿವಾಹ” ಕಾರ್ಯಕ್ರಮ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಧಮ್ಮಾನಂದ ಭಂತೆಜೀ ವಹಿಸಿದ್ದು, ಕಾರ್ಯಕ್ರಮವನ್ನು ಸಂಸದರಾದ ಸಾಗರ್ ಖಂಡ್ರೆ ಜೀ ಅವರು ಉದ್ಘಾಟಿಸಿ, ವಿವಾಹಿತ ದಂಪತಿಗಳಿಗೆ ಆಶೀರ್ವಾದ ಹಾಗೂ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶ್ರೀ ಅನಿಲ್ ಕುಮಾರ್ ಮೇಲ್ದೊಡ್ಡಿ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಿಠಲ್ ದಾಸ್ ಪ್ಯಾಗೆ, ಜ್ಞಾನೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಕಾಶಿನಾಥ್ ಚಲ್ವ, ಹಾಜರಿದ್ದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದವರು ರಾಚಪ್ಪ ಖರ್ಗೆ ಆಗಿದ್ದು, ಗೌರವ ಅಧ್ಯಕ್ಷತೆ ಯುಗಪುರುಷ ಚತುರೆ ವಹಿಸಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಮಾಜಿ ಸದಸ್ಯ ಧನರಾಜ್ ಹಂಗರಗಿ, ಮಹಾನಗರ ಪಾಲಿಕೆ ಸದಸ್ಯ ಸೂರ್ಯಕಾಂತ್ ಸಾದುರೆ, ಓSUI ಜಿಲ್ಲಾ ಉಪಾಧ್ಯಕ್ಷ ಮುಕೇಶ್ ಚಲ್ವಾ, ಯುವ ಮುಖಂಡರು ಪವನ ಮಿಠಾರೆ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಸಾಮೂಹಿಕ ವಿವಾಹದ ಯಶಸ್ವಿ ಆಯೋಜನೆಗೆ ಭೀಮರಾವ್ ಮಾಲಗತ್ತಿ, ಮಲ್ಲಿಕಾರ್ಜುನ ಕಪಲಾಪುರೆ, ಮಿಲಿಂದ ಕಾಂಬ್ಳೆ, ಅಮರ ಸಾಗರ, ರಮದೇವಿ ಸ್ವಾಮಿ, ದೀಲಿಪ್, ಹರೀಶ, ಗೌತಮ್ಮ ಮುತಂಗಿಕರ, ಚಂದ್ರಕಾಂತ ಕಾಂಬ್ಳೆ, ದೇವರಾಜ್ ಪಾಟೀಲ್, ರಾಜಶೇಖರ್ ಸೊರಳಿ ಮುಂತಾದವರು ಶ್ರಮಿಸಿದರು.
ಈ ಸರಳ ಮತ್ತು ಸಾಂಪ್ರದಾಯಿಕ ವಿವಾಹದಲ್ಲಿ ಒಟ್ಟು 151 ವಧು-ವರರು ಭಾಗವಹಿಸಿ ಜೀವನದ ಹೊಸ ಪಯಣ ಆರಂಭಿಸಿದರು.