Home ಜಿಲ್ಲೆ ಕಲಬುರಗಿ ಲೋಕೋಪಯೋಗಿ ಸಚಿವರ ಮನೆಗೆ ಮುತ್ತಿಗೆ: ನರಿಬೋಳ ಎಚ್ಚರಿಕೆ

ಲೋಕೋಪಯೋಗಿ ಸಚಿವರ ಮನೆಗೆ ಮುತ್ತಿಗೆ: ನರಿಬೋಳ ಎಚ್ಚರಿಕೆ

ಕಲಬುರಗಿ,ಮಾ.13-ಜೇವರ್ಗಿ ತಾಲ್ಲೂಕಿನ ನರಿಬೋಳ ಚಾಮನೂರಿನ ಸೆತುವೆ ಕೆಲಸ ಕಂಪನಿಯ ನಿರ್ಲಕ್ಷದಿಂದ ಹಲವರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇನ್ನೇನು ಕೆಲಸ ಪ್ರಾರಂಭವಾಗಬೇಕಿದ್ದ ಸಂದರ್ಭದಲ್ಲಿ ಬಂದ ಪ್ರವಾಹಕ್ಕೆ ಸ್ಲಾಬ್ಗಳು ನದಿಯಲ್ಲಿ ಬಿದ್ದವು. ಆ ಸಂದರ್ಭದಲ್ಲಿ ಅಧಿಕಾರಿಗಳು ಗ್ರಾಮಸ್ಥರ ಜೊತೆ ಚರ್ಚಿಸಿ ಹಾನಿಯನ್ನು ಕಂಪನಿಯಿಂದ ವಸೂಲಿ ಮಾಡುತ್ತೇವೆ. ಕಂಪನಿಯನ್ನು ಕಪ್ಪು ಪಟ್ಟಿಗೆ ಸೆರೆಸಲು ಶಿಫಾರಸ್ಸು ಮಾಡುತ್ತೆವೆ ಎಂದು ತಿಳಿಸಿದ್ದರು. ಆದರೆ ಹಾನಿ ವಸೂಲಿಗೆ ಸರ್ಕಾರದ ಮುಖ್ಯ ಇಂಜಿನಿಯರ್ ಅವರಿಗೆ ಸೂಚಿಸಿದ್ದು ಕಂಪನಿ ಕಪ್ಪು ಪಟ್ಟಿಗೆ ಸೆರಿಸುವ ಕುರಿತಂತೆ ಯಾವುದೆ ಬೆಳವಣಿಗೆ ಕಂಡು ಬರುತ್ತಿಲ್ಲ. ಕೂಡಲೆ ಕಂಪನಿ ಕಪ್ಪು ಪಟ್ಟಿಗೆ ಸೆರಿಸುವ ನಿರ್ಧಾರ ಕೈಗೊಂಡು ಅಪೂರ್ಣಗೊಂಡಿರುವಂತಹ ಸೇತುವೆ ಕೇಲಸ ಪ್ರಾರಂಭಿಸಬೆಕು ನಿರ್ಲಕ್ಷಿಸಿದರೆ ಲೋಕೋಪಯೋಗಿ ಸಚಿವರ ಬೆಂಗಳೂರಿನ ಮನೆಗೆ ಮುತ್ತಿಗೆ ಹಾಕಬೆಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಎಚ್ಚರಿಸಿದ್ದಾರೆ.