ಶ್ರಾವಣ ಸಂಭ್ರಮ :ಚಿಕ್ಕತಿರುಪತಿ ದೇವಸ್ಥಾನಕ್ಕೆ ಭಕ್ತರು ದಂಡು

ಮಾಲೂರು.ಆ೧೭:ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.


ಮುಂಜಾನೆ ೪ರಿಂದ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಿ, ಇನ್ನೂ ವಿಶೇಷ ದರ್ಶನಕ್ಕೆ ೧೦೦ ರೂ ನಿಗದಿ ಪಡಿಸಿ, ವಿಶೇಷ ಅನುಕೂಲ ಕಲ್ಪಿಸಲಾಗಿತ್ತು ಈ ವಿಶೇಷ ದರ್ಶನದ ಟಿಕೆಟ್ ಪಡೆದ ಭಕ್ತರಿಗೆ ಒಂದು ಲಡ್ಡು ದೇವಸ್ಥಾನದ ವತಿಯಿಂದಲೇ ನೀಡಲಾಗುತ್ತಿತ್ತು. ದೇವಸ್ಥಾನಕ್ಕೆ ಬೆಂಗಳೂರು, ಕೋಲಾರ, ಹೊಸಕೋಟೆ, ಆನೇಕಲ್, ಮಾಲೂರು, ಕೆಜಿಎಫ್, ಅಲ್ಲದೆ ನೆರೆಯ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಮತ್ತು ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ಭಕ್ತರು ಆಗಮಿಸಿ, ಭಕ್ತರು ದೇವರ ದರ್ಶನ ಪಡೆದರು.


ಅನೇಕ ಭಕ್ತರು ಹರಕೆಗಳನ್ನು ಹೊತ್ತು ದೇವಸ್ಥಾನಕ್ಕೆ ಬರುತ್ತಾರೆ ಹಾಗೆಯೇ, ಭಕ್ತರ ಹರಕೆಗಳು ತೀರಿದ ನಂತರ ಮೂಡಿ ಕೊಡುವ ಪದ್ಧತಿ ಇಲ್ಲಿಯದು. ಹೊಸಕೋಟೆ ತಾಲ್ಲೂಕಿನ ವಾಗಟ ಗ್ರಾಮ ಪಂಚಾಯಿತಿಯ ಗ್ರಾಪಂ ಸದಸ್ಯರಾದ ಮಾಕನಹಳ್ಳಿ ಮಧು ಮತ್ತು ಅವರ ಕುಟುಂಬದವರಿಂದ ದೇವಸ್ಥಾನದ ಎಲ್ಲಾ ಸಿಬ್ಬಂದಿಗೆ ಬಟ್ಟೆಗಳನ್ನು ವಿತರಣೆ ಮಾಡಿದರು.


ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಾಲೂರು ನಗರದ ದಿವಂಗತ ಡಿಟಿ ಪುಟ್ಟಪ್ಪ ಅವರ ಕುಟುಂಬದವರು ಪುಳಿಯೋಗರೆ ವಿತರಿಸಿದರು. ಚಿಕ್ಕ ತಿರುಪತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ವಿ ಮಂಜುನಾಥ್ ಅವರು ಅನ್ನ ಸಂತರ್ಪಣ ವ್ಯವಸ್ಥೆ ಮಾಡಿದ್ದರು, ಕಲ್ಕೆರೆ ಬಾಬು ಅವರು ಭಕ್ತಾದಿಗಳಿಗೆ ಲಡ್ಡು ಪ್ರಸಾದ ವಿತರಿಸಿದರು.


ಗಣ್ಯರ ಭೇಟಿ
ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಶಾಸಕ ಕೆ ವೈ ನಂಜೇಗೌಡ, ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ, ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ, ಮಾಜಿ ಜಿಪಂ ಸದಸ್ಯರಾದ ರಾಮೇಗೌಡ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಮೂರ್ತಿ, ಗ್ರಾ.ಪಂ. ಅಧ್ಯಕ್ಷ ಜಿ.ವಿ.ಮಂಜುನಾಥ್, ತಾ.ಪಂ. ಮಾಜಿ ಸದಸ್ಯ ನಾಗೇಶ್, ಸೇರಿದಂತೆ ವಿವಿಧ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.


ಭಕ್ತರು ಮಧ್ಯಾಹ್ನ ಸುರಿದ ಮಳೆಯ ನಡುವೆಯೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.


ಕಾರ್ಯನಿರ್ವಹಣಾಧಿಕಾರಿ ಟಿ ಸೆಲ್ವಮಣಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕನೇ ಶನಿವಾರ ಹಾಗೂ ಕಡೆ ಶನಿವಾರ ವಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕೆ ಆಗಮಿಸಿ ಸಾರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.


ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮತ್ತು ದರ್ಶನಕ್ಕೆ ಬರುವ ಸರತಿ ಸಾಲಿಗೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು ಹಾಗೂ ದೇವಸ್ಥಾನದ ಆವರಣದಲ್ಲಿ ಪ್ರತಿ ವಾರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ದೇವಾಲಯದ ವತಿಯಿಂದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಊಟದ ವ್ಯವಸ್ಥೆ, ಈ ಬಾರಿ ೫ ಶ್ರಾವಣ ಶನಿವಾರಗಳು ಬರುತ್ತದೆ ಎಲ್ಲಾ ವಾರಗಳಲ್ಲಿಯೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವ್ಯವಸ್ಥಾಪನಾ ಸಮಿತಿಯಿಂದ ವಿಶೇಷ ಕಾಳಜಿ ವಹಿಸಿ ಅನುಕೂಲ ಕಲ್ಪಿಸಲಾಗಿದೆ. ಎಂದು ಅವರು ಹೇಳಿದರು.