ಕುಂಬಾರ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಗೂಡಂಗಡಿಗಳು ತೆರವು.ಪೌರಾಯುಕ್ತ ಜ್ಯೋತಿಗೀರಿಶ

ಸಂಜೆ ವಾಣಿ ವಾರ್ತೆ
ಜಮಖಂಡಿ:ಜ.೩೧: ನಗರದ ಕುಂಚನೂರು ರಸ್ತೆಯಲ್ಲಿರುವ ಕುಂಬಾರ ಕೆರೆಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮುಂಭಾಗದಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗೆದೆ ಎಂದು ಪೌರಾಯುಕ್ತ ಜ್ಯೋತಿಗೀರಿಶ ಹೇಳಿದರು.

ಈಗಾಗಲೇ ಕುಂಬಾರ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ ಆದರಿಂದ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ವಾಕಿಂಗ್ ಟ್ರ‍್ಯಾಕ್, ಸಾರ್ವಜನಿಕ ಶೌಚಾಲಯ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ನಿಟ್ಟಿನಲ್ಲಿ ಈ ಅನಧಿಕೃತ ಗೂಡಗಂಡಿಗಳನ್ನು ತೆರವು ಮಾಡಲಾಗಿದೆ ಎಂದು ಹೇಳಿದರು

ಹಿರಿಯ ಆರೋಗ್ಯ ನಿರೀಕ್ಷ ರಾಜಕುಮಾರ ಪಾಟೀಲ, ಮಂಜುನಾಥ ಹಡಪದ ಸಿಬ್ಬಂದಿಗಳಾದ ಶ್ರೀಕಾಂತ ಘಾಟಗೆ,ರಾಘು ಕಡಕೋಳ ಇನ್ನಿತರರು ಇದ್ದರು