ಶಿವಬಸವ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ,ಫೆ.10-ಗಡಿನಾಡು ಅಕ್ಕಲಕೋಟ ತಾಲೂಕಿನ ಕಾರುಣಿ ಸಲಗರ ಗ್ರಾಮದ ಶಿವಬಸವೇಶ್ವರ ವಿರಕ್ತ ಮಠದಲ್ಲಿ ಲಿಂಗಯ್ಯ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜರುಗಿದ ಸಮಾಜದ ಸಂಜೀವಿನಿ ಹಾನಗಲ್ಲ ಕುಮಾರ ಮಹಾ ಶಿವಯೋಗಿಗಳ ಪುರಾಣ ಮಹಾ ಮಂಗಲೋತ್ಸವದಲ್ಲಿ ಶಿವಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುರುಮಂನ ಶಿವಬಸವ ಮಹಾಸ್ವಾಮಿಗಳು, ಪಡಸಾವಳಗಿಯ ಶಂಭುಲಿಂಗ ಶಿವಾಚಾರ್ಯರು, ಅಕ್ಕಲಕೋಟದ ಬಸವಲಿಂಗ ಮಹಾಸ್ವಾಮಿಗಳು, ನರೂಣದ ಮಹಾಂತ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಕಾರೂಣಿ ಸಲಗರ ವಿರಕ್ತಮಠದ ಲಿಂಗಯ್ಯ ದೇವರು, ಗುಳೆದಗುಡದ ರೇವಣಸಿದ್ಧ ಶ್ರೀಗಳ ಸಮ್ಮುಖದಲ್ಲಿ ಕಲ್ಯಾಣ ನಾಡಿನ ವಾಗ್ಮಿ ಸಾಹಿತಿಗಳಾದ ಆಳಂದ ತಾಲೂಕಿನ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರೀ, ಗಾಯಕರಾದ ಕುಲ್ಯಾಣ ಕುಮಾರ ಕಾರಭಾಸಗಿ, ತಬಲಾವಾದಕರಾದ ಬಸವರಾಜ ಚಲಗೇರಿ, ಸಮಾಜ ಸೇವಕರಾದ ಲಕ್ಷ್ಮಣ ಸಮಾಣೆ ತಾತೆ ಅವರಿಗೆ ಶಿವಬಸವೇಶ್ವರ ವಿರಕ್ತಠದ ಹಾಗೂ ಕಾರೂಣಿ ಸಲಗರದ ಜೀವನ ದಿಶಾ ಫೌಂಡೇಶ ವತಿಯಿಂದ “ಶಿವಬಸವ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಡೊಂಗರಾಜೆ, ಮ?ಂದರಗಿಯ ಸಂಸ್ಕøತ ಶಿಕ್ಷಕರಾದ ಶಿವಚಲ ಶಾಸ್ತ್ರಗಳು, ಮಲ್ಲಿಕಾರ್ಜುನ ನಿಂಗಶೆಟ್ಟಿ ನಿರೂಪಿಸಿದರು.