ಕಲಬುರಗಿ: ನಗರದ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಯಲ್ಲಿ ದ್ವಿತೀಯ ವಾರ್ಷಿಕ ಸ್ಮರಣಾರ್ಥಕವಾಗಿ ರಕ್ತದಾನ ಶಿಬಿರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು.
ಈ ಶಿಬಿರದಲ್ಲಿ ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್ ಆರ್, ಪ್ರಿನ್ಸಿಪಾಲ್ ಡಾ. ಅಜಯ್ ಗುಡದೂರ, ಡಾ. ಶಿವಕುಮಾರ್ ಮತ್ತು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಪ್ರಾಧ್ಯಾಪಕರು, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಇತರರು ಭಾಗವಹಿಸಿದ್ದರು.