Home ಮುಖಪುಟ ಸುದ್ದಿ ಮಂಗಳೂರಿಗೆ ಬಂದ ಎಲ್‌ಪಿಜಿ ಹೊತ್ತ ಹಡಗು

ಮಂಗಳೂರಿಗೆ ಬಂದ ಎಲ್‌ಪಿಜಿ ಹೊತ್ತ ಹಡಗು

ನವದೆಹಲಿ,ಮಾ.೨೨- ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಹೆಚ್ಚು ಮಾಡಿರುವ ನಡುವೆ ಅಮೆರಿಕದಿಂದ ೪೭,೨೩೬ ಟನ್ ಎಲ್‌ಪಿಜಿ ಹೊತ್ತ ಸರಕು ಹಡಗು “ಪೈಕ್ಸಿಸ್ ಪಯೋನೀರ್” ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ -ಎಲ್‌ಪಿಜಿ ಹೊಸ ಸರಕು ಭಾರತಕ್ಕೆ ಬಂದಿದೆ. ಟೆಕ್ಸಾಸ್‌ನ ನೆಡರ್‍ಲ್ಯಾಂಡ್‌ನಿಂದ ಎಲ್‌ಪಿಜಿಯನ್ನು ಹೊತ್ತೊಯ್ಯುತ್ತಿದ್ದ ಪಿಕ್ಸಿಸ್ ಪಯೋನೀರ್ ಸರಕು ಹಡಗು ನವಮಂಗಳೂರು ಬಂದಿಗೆ ಆಗಮಿಸಿದೆ.

ಭಾರತ ತನ್ನ ಆಮದುಗಳಲ್ಲಿ ಶೇಕಡಾ ೬೦ರಷ್ಟು ಪ್ರತಿಶತವನ್ನು ಪಡೆಯುವ ನಿರ್ಣಾಯಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸ್ಥಗಿತಗೊಳಿಸಿದ ನಡುವೆ ಅಮೇರಿಕಾದಿಂದ ಎಲ್ ಪಿಜಿ ಹೊತ್ತ ಹಡಗು ನವ ಮಂಗಳೂರು ತಲುಪಿದೆ.

ಸಿಂಗಾಪುರ ಧ್ವಜ ಹೊತ್ತ ೪೭,೨೩೬ ಟನ್ ಒಟ್ಟು ತೂಕದ ಟ್ಯಾಂಕರ್ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬರ್ತ್ ಸಂಖ್ಯೆ ೧೩ ರಲ್ಲಿ ಬಂದಿಳಿದಿದೆ. ಫೆಬ್ರವರಿ ೧೪ ರಂದು ಟೆಕ್ಸಾಸ್‌ನ ನೆಡರ್‍ಲ್ಯಾಂಡ್ ಬಂದರಿನಿಂದ ಹೊರಟಿತ್ತು. ಹಡಗು, ಹೊರಡುವ ಮೊದಲು ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ೧೬,೭೧೪ ಟನ್ ಎಲ್‌ಪಿಜಿ ಬಿಡುಗಡೆ ಮಾಡಿತ್ತು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಭಾರತಕ್ಕೆ ಇಂಧನ ಸರಬರಾಜು ಅಡ್ಡಿಪಡಿಸಿದೆ ಇದರಿಂದಾಗಿ ಮನೆಯ ಅಡುಗೆಮನೆಗಳಿಗೆ ಸರಬರಾಜು ಮಾಡಲು ಆದ್ಯತೆ ನೀಡಲು ಹೋಟೆಲ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಸರಬರಾಜಿನಲ್ಲಿ ಆರಂಭಿಕ ಸಮಸ್ಯೆ ಎದುರಾಗಿತ್ತು

ಮೂರು ಹಡುಗು ಆಗಮನ

ಇದಕ್ಕೂ ಮೊದಲು, ಮಾರ್ಚ್ ೧೮ ರಂದು, ಸುಮಾರು ೮೦,೮೦೦ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತ ಕಚ್ಚಾ ತೈಲ ಟ್ಯಾಂಕರ್ ಜಗ್ ಲಾಡ್ಕಿ ಮುಂದ್ರಾ ಬಂದರಿನಲ್ಲಿ ಬಂದಿಳಿದಿತ್ತು. ಜೊತೆಗೆ, ಎರಡು ಎಲ್‌ಪಿಜಿ ವಾಹಕಗಳು – ವಡಿನಾರ್ ಬಂದರಿಗೆ ಸುಮಾರು ೪೭,೦೦೦ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ತಂದ ನಂದಾ ದೇವಿ ಮತ್ತು ಮುಂದ್ರಾ ತಲುಪಿದ ಶಿವಾಲಿಕ್ – ಇತ್ತೀಚೆಗೆ ದೇಶಕ್ಕೆ ಸರಬರಾಜು ಸುಗಮಗೊಳಿಸಿದೆ

ಈ ಸಾಗಣೆಗಳು ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಸಮಯದಲ್ಲಿ ಬಂದಿವೆ ಅಡುಗು ಅನಿಲಿ ಸರಬರಾಜು ಮಾಡಲು ಸಹಕಾರಿಯಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬಂದರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸಂಭವನೀಯ ದಾಳಿಗಳ ಬಗ್ಗೆ ಇರಾನ್ ಎಚ್ಚರಿಕೆ ನೀಡಿದ್ದರೂ ಸಹ, ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಇರಾನ್ ಖಚಿತಪಡಿಸಿದೆ.

ಭಾರತ ತನ್ನ ಇಂಧನ ಅಗತ್ಯಗಳಿಗಾಗಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಕಚ್ಚಾ ತೈಲದ ಸುಮಾರು ೮೮ ಪ್ರತಿಶತ, ನೈಸರ್ಗಿಕ ಅನಿಲದ ೫೦ ಪ್ರತಿಶತ ಮತ್ತು ಎಲ್‌ಪಿಜಿಯ ಸುಮಾರು ೬೦ ಪ್ರತಿಶತವನ್ನು ವಿದೇಶಗಳಿಂದ ಪಡೆಯುತ್ತಿದೆ.

ಫೆಬ್ರವರಿ ೨೮ ರಂದು ಇರಾನ್ ಮೇಲೆ ಅಮೇರಿಕಾ-ಇಸ್ರೇಲ್ ದಾಳಿಯ ನಂತರದ ಉಲ್ಬಣಕ್ಕೆ ಮುಂಚಿತವಾಗಿ, ಈ ಆಮದುಗಳಲ್ಲಿ ಗಮನಾರ್ಹ ಪಾಲು ಸೌದಿ ಅರೇಬಿಯಾ ಮತ್ತು ಯುಎಇಯಂತಹ ಮಧ್ಯಪ್ರಾಚ್ಯ ದೇಶಗಳಿಂದ ಕಚ್ಚಾತೈಲ ಸರಬರಾಜಾಗಿತ್ತು