ಅ. 20 ರಿಂದ 22 ರವರೆಗೆ ಸಿಬ್ಬಂದಿಗಳಿಗೆ ಜಾತಿ ಸಮೀಕ್ಷೆ ಕಾರ್ಯಕ್ಕೆ ನೇಮಿಸದೆ ದೀಪಾವಳಿ ಹಬ್ಬ ಆಚರಣೆ ಮಾಡಲು ಅವಕಾಶ ನೀಡುವಂತೆ ಶಶೀಲ್ ನಮೋಶಿ ಒತ್ತಾಯ

ಕಲಬುರ್ಗಿ:ಅ.20: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಸಿಬ್ಬಂದಿಗಳು ಸರ್ಕಾರದ

ಆದೇಶದಂತೆ ತಮಗೆ ವಹಿಸಿರುವ ಕೆಲಸವನ್ನು ಚಾಚೂ ತಪ್ಪದೆ ಪಾಲಿಸಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಮಗೆ ನೀಡಿದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದ ನಾಡ ಹಬ್ಬ ನಮ್ಮ ಸಂಸ್ಕøತಿಯ ಪವಿತ್ರ ಹಬ್ಬ ವಿಜಯದಶಮಿ, ನವರಾತ್ರಿ ಹಬ್ಬದಲ್ಲಿ ಸರ್ಕಾರಿ ರಜೆಗಳಿದ್ದರೂ ಕೂಡ ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಅಧಿಕೃತ ರಜೆಯಿದ್ದರು ಸರ್ಕಾರ ಆದೇಶದಂತೆ ಗಣತಿ ಕಾರ್ಯ ಕೈಗೊಂಡಿದ್ದಾರೆ. ನವರಾತ್ರಿ ಸಮಯದಲ್ಲಿ 9 ದಿನಗಳ ಕಾಲ ಅನೇಕ ಶಿಕ್ಷಕರು. ಶಿಕ್ಷಕಿಯರು ಉಪವಾಸ ಮಾಡುತ್ತಿದ್ದರೂ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸರ್ಕಾರಿ ನೌಕರರು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರೂ ಕೂಡ ಸರ್ಕಾರ ಅವರ ಮೇಲೆ ವಿನಾಕಾರಣ ಒತ್ತಡ ಹೇರಿ ಅವರಿಗೆ ನೀಡಿದ ಮನೆಯ ಸಮೀಕ್ಷೆಗಳ ಜವಾಬ್ದಾರಿಗಳಿಗಿಂತಲೂ ಹೆಚ್ಚಿನ ಮನೆಗಳ ಸಮಿಕ್ಷೆ ಮಾಡಿದ್ದರೂ ಇತ್ತೀಚೆಗೆ ನಿಯಮ 12 ರಡಿ ನೋಟಿಸ್ ಜಾರಿ ಮಾಡಿ ಸುಮಾರು 541 ಶಿಕ್ಷಕರಿಗೆ ತೊಂದರೆ ಕೊಟ್ಟು ಅಮಾನತು ಮಾಡುವುದಾಗಿ ನೋಟಿಸ್ ನೀಡಲಾಗಿತ್ತು. ವಿನಾಕಾರಣ ಶಿಕ್ಷಕರ ಮೇಲಿನ ಒತ್ತಡದಿಂದಾಗಿ ಅವರು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ನಮ್ಮ ದೇಶದ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ವಿಜಯದಶಮಿ ಸಂಭ್ರಮ ಆಚರಣೆಯನ್ನು ತಪ್ಪಿಸಿಕೊಂಡಿರುವ ಶಿಕ್ಷಕ ಸಮುದಾಯ ಈಗ ನಮ್ಮ ದೇಶದ ಅತ್ಯಂತ ದೊಡ್ಡ ಹಬ್ಬವಾಗಿರುವ ದೀಪಾವಳಿ ಆಚರಣೆಯಿಂದಲೂ ವಂಚಿತರಾಗುವಂತೆ ತೋರುತ್ತಿದೆ. ಏಕೆಂದರೆ ಸರ್ಕಾರ ಉದ್ದೇಶ ಪೂರ್ವಕವಾಗಿ ಹಿಂದೂಗಳ ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧ ಮಾಡುತ್ತಿರುವ ಸಂಶಯ ಮೂಡುತ್ತಿದೆ. ದಿನಾಂಕ 18/10/2025 ರಂದು ಗಣತಿ ಸಮೀಕ್ಷೆಯ ಕೊನೆಯ ದಿನ ಎಂದು ಹೇಳಲಾಗಿತ್ತು. ಆದರೆ ಕೆಲವು ಜಿಲ್ಲಾಧಿಕಾರಿಗಳು 19/10/2025 ರಂದು ರವಿವಾರ ಇದ್ದರೂ ಕೆಲಸ ಮಾಡಲೆಬೇಕು ಎಂದು ದೂರವಾಣಿ ಮುಖಾಂತರ ಹೆದರಿಸುತ್ತಿರುವುದು ಖಂಡನೀಯ.

ನನಗೆ ಇಂದು ರಾಯಚೂರು ಜಿಲ್ಲೆಯ ಶಿಕ್ಷಕ ಸಮುದಾಯ ದೂರವಾಣಿಯ ಮುಖಾಂತರ ತಿಳಿಸಿರುವಂತೆ ಸರ್ಕಾರದ ನಿಯಮದಂತೆ ವರ್ಷದಲ್ಲಿ 5 ಸ್ಥಳೀಯ ರಜೆಗಳಲ್ಲಿ ಒಂದು ರಜೆಯನ್ನು ಹಿಂದೂ ಧರ್ಮದ ಪವಿತ್ರ ಹಬ್ಬವಾದ ದೀಪಾವಳಿ ಅಮವಾಸ್ಯೆಗಾಗಿ ಎಸ್.ಡಿ.ಎಂ.ಸಿ ನೇತ್ರತ್ವದಲ್ಲಿ ಸಭೆ ನಡೆಸಿ ನಿರ್ಣಯ ಮಾಡಿ ಠರಾವಿನಂತೆ ಸ್ಥಳೀಯ ರಜೆ ಘೋಷಣೆ ಮಾಡಿದ್ದರೂ ಕೂಡ ಜಿಲ್ಲಾಧಿಕಾರಿಗಳು ರಜೆ ತೆಗೆದುಕೊಂಡು ದೀಪಾವಳಿ ಹಬ್ಬ ಆಚರಿಸಿದೆ ಸಮೀಕ್ಷೆ ಕಾರ್ಯ ಮುಂದುವರಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ರೀತಿ ಒತ್ತಡ ಹೇರುತ್ತಿರುವುದನ್ನು ನೋಡಿದರೆ ಸರ್ಕಾರವು ಸಮೀಕ್ಷೆ ಕಾರ್ಯದ ನೆಪದಲ್ಲಿ ಹಿಂದೂ ಧರ್ಮದ ಆಚರಣೆಗಳಿಗೆ ಉದ್ದೇಶ ಪೂರ್ವಕವಾಗಿ ವಿರೋಧ ಮಾಡುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಅಕ್ಟೋಬರ್ 20 ಹಾಗೂ 22 ರಂದು ಸರ್ಕಾರಿ ರಜೆಗಳಿದ್ದರೂ ಈ ರೀತಿಯ ಒತ್ತಡ ಹೇರುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಉತ್ಸಾಹದಿಂದ ಕಾರ್ಯ ಮಾಡುತ್ತಿರುವ ಶಿಕ್ಷಕರ ಮೇಲೆ ವಿನಾಕಾರಣ ಕಿರುಕುಳ ನೀಡುತ್ತಿರುವುದರಿಂದ ಅವರು ಮಾನಸಿಕವಾಗಿ ದೈಹಿಕವಾಗಿ ಕುಗ್ಗುತ್ತಿದ್ದಾರೆ.
ಹಿಂದೂಗಳ ಹಬ್ಬದಂತೆ ಬೇರೆ ಧರ್ಮಿಯರ ಹಬ್ಬಗಳ ರಜೆಗಳನ್ನು ನಿಬರ್‍ಂಧಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೆಪಿಸುವುದನ್ನು ಬಿಟ್ಟು ಈ ರೀತಿಯಾಗಿ ಅವರಿಗೆ ಒತ್ತಡ ಹೇರುವುದನ್ನು ಕೂಡಲೇ ಕೈ ಬಿಡಬೇಕು ಹಿಂದೂಗಳ ಪವಿತ್ರ ಹಬ್ಬ ಹರಿದಿನಗಳಲ್ಲಿ ಅವರ ಕುಟುಂಬದ ಸದಸ್ಯರ ಜೋತೆ ಹಬ್ಬಗಳ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕು.

ಶಿಕ್ಷಕ/ಸಿಬ್ಬಂದಿಗಳು ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದರೂ ಅವರಿಗೆ ವಿನಾಕಾರಣ ಕೆಲವು ಮೇಲಾಧಿಕಾರಿಗಳು ನೋಟೀಸ್ ನೀಡುವುದಾಗಿ ಅಮಾನತ್ತು ಮಾಡುವುದಾಗಿ ಹೆದರಿಸುತ್ತಿರುವುದರಿಂದ ಸಿಬ್ಬಂದಿಗಳು ಮಾನಸಿಕ ಒತ್ತಡಕ್ಕೊಳಗಾಗಿ ಅಪಘಾತಕ್ಕೀಡಾಗಿ/ಅನಾರೋಗ್ಯದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಹಿಸಿದ ಕೆಲಸ ನಿರ್ವಹಿಸದರೂ ಸಿಬ್ಬಂದಿಗಳಿಗೆ ಹೆದರಿಸುತ್ತಿರುವುದರಿಂದ ಅವರೂ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅಕ್ಟೋಬರ್ 20 ರಿಂದ 22 ರವರೆಗೆ ನೌಕರರ ಮೇಲೆ ಒತ್ತಡ ಹೇರದೆ ತಮ್ಮ ಕುಟುಂಬಗಳೊಂದಿಗೆ ಹಬ್ಬ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕು ಹಾಗೂ ಮಿಕ್ಕುಳಿದ ಸಮೀಕ್ಷೆ ಕಾರ್ಯ ಹಬ್ಬದ ನಂತರದ ದಿನಗಳಲ್ಲಿ ನಡೆಸುವಂತೆ ಒತ್ತಾಯಿಸುತ್ತೇನೆ ಎಂದು ಶಶೀಲ್ ಜಿ. ನಮೋಶಿ ಶಾಸಕರು, ಕರ್ನಾಟಕ ವಿಧಾನ ಪರಿಷತ್ತು ತಿಳಿಸಿದ್ದಾರೆ.