ಪ್ರತ್ಯೇಕ ಜೂಜಾಟ: 25 ಜನರ ಬಂಧನ

ಕಲಬುರಗಿ,ಅ.23-ನಗರದ ವಿವಿಧೆಡೆ ದಾಳಿ ನಡೆಸಿದ ಪೊಲೀಸರು 25 ಜನರನ್ನು ಬಂಧಿಸಿ 84,760 ರೂ ಜಪ್ತಿ ಮಾಡಿದ್ದಾರೆ.
ನಗರದ ನಂದೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮತ್ತು ಕಡಣಿ ಗ್ರಾಮದ ಕಾಳಪ್ಪರವರ ದನದ ಕೊಟ್ಟಿಗೆಯಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕ ಮತ್ತು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ 17 ಜನರನ್ನು ಬಂಧಿಸಿದ್ದಾರೆ.
ಕಡಣಿ ಗ್ರಾಮದ ಕಾಳಪ್ಪರವರ ದನದ ಕೊಟ್ಟಿಗೆಯಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಭೋಜರಾಜ ರಾಠೋಡ್, ಸಿಬ್ಬಂದಿಗಳಾದ ಸಾಜಿದ್ ಪಾಷಾ, ಮೈಬೂಬ್, ಮಂಜುನಾಥ, ತಿರುಪತಿ, ಎಂ.ಆರ್.ಪಟೇಲ್ ಅವರು ದಾಳಿ ನಡೆಸಿ ಹಣಮಂತರಾಯ ಚಲಗೇರಿ, ದೇವರಾಯ ದ್ಯಾವಪ್ಪಗೋಳ, ದೇವಿಂದ್ರಪ್ಪ ನೂಕಾಣಿ, ಮಹಾದೇವಪ್ಪ ಮಾಡಿ, ನಾಗಣ್ಣ ಸೂರ್ಯಗೌಡರು, ಮಲ್ಲಿಕಾರ್ಜುನ ಸಿದ್ದಣ್ಣಗೌಡರು, ಶರಣಬಸಪ್ಪ ಕೊಳ್ಳುರ, ರಾಜು ದೇವನ್, ಉಮೇಶ್ ಬಿರೆದಾರ, ಗುಂಡೆರಾವ ಶಿವರಾಗೊಳ ಎಂಬುವವರನ್ನು ಬಂಧಿಸಿ 11060 ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ನಂದೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎಎಸ್‍ಐ ನಿಜಲಿಂಗಪ್ಪ, ಸಿಬ್ಬಂದಿಗಳಾದ ಸಂಜುಕುಮಾರ, ಈರಣ್ಣಾ, ಪ್ರಕಾಶ, ರಾಜಕುಮಾರ ಅವರು ದಾಳಿ ನಡೆಸಿ ಶಿವಕುಮಾರ ಹಂಗರಗಿ, ಸುನೀಲ ಮುದ್ದಡಗಿ, ರಾಹುಲ್ ಬಿಸೇ, ಖಾಜಾಮೈನೊದ್ದಿನ್, ಅರ್ಜುನ ಮಕ್ಕಳಕರ, ಅಮರನಾಥ ಬಿರಾದಾರ, ಪ್ರವೀಣ್ ಜಾನತಿ ಎಂಬುವವರನ್ನು ಬಂಧಿಸಿ 3,200 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಫರಹತಾಬಾದ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಗರದ ಎಪಿಎಂಸಿ ಕಾಟನ್ ಮಾರ್ಕೆಟ್ ಹತ್ತಿರದ ಲಕ್ಷ್ಮೀ ದೇವಸ್ಥಾನ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್, ಸಿಬ್ಬಂದಿಗಳಾದ ಗುರುಮೂರ್ತಿ, ಶಿವಾನಂದ, ಬಂದೇನವಾಜ್, ಸಂಜೀವಕುಮಾರ, ಸಯ್ಯದ್ ತೌಸೀಫ್ ಹುಸೇನ್, ಅಭಿಷೇಕ್ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಅನೀಲ ಲಗಶೆಟ್ಟಿ, ಆಕಾಶ ಮಾರುತಿ, ಗುರುರಾಜ ಚಿತ್ತಣ, ಸಾಗರ ಜಾಧವ್, ಸತೀಶ್ ಉದನೂರ, ಸುದರ್ಶನ ದುಮಲಸೂರ, ಮಲ್ಲಿಕಾರ್ಜುನ ಬೋಧನ, ಕೂಡಲಸಂಗಮೇಶ ಚೌಲ್ ಎಂಬುವವರನ್ನು ಬಂಧಿಸಿ 70,500 ರೂ.ನಗದು ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.