1.46 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಅ.23-ಮನೆ ಬೀಗ ಮುರಿದು 1,46,600 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಕುಸನೂರ ರಸ್ತೆಯ ಪ್ರಶಾಂತ ನಗರ (ಬಿ) ಜಿಡಿಎ ಕಾಲೋನಿಯಲ್ಲಿ ನಡೆದಿದೆ.
ಮಣಿಸಿಂಗ್ ಚವ್ಹಾಣ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಉಂಗುರ, 8 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಮೂಗಿನ ನತ್ತು, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 12 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಮಂಗಳಸೂತ್ರದಲ್ಲಿನ ಸಣ್ಣ ಗುಂಡುಗಳು, 6 ಸಾವಿರ ರೂ.ಮೌಲ್ಯದ 20 ತೊಲೆ ಬೆಳ್ಳಿಯ ಕಾಲು ಚೈನ, 600 ರೂ.ಮೌಲ್ಯದ 20 ಗ್ರಾಂ.ಬೆಳ್ಳಿ ಕಾಲುಂಗರ, 60 ಸಾವಿರ ರೂ.ನಗದು ಸೇರಿ 1.46 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಲಕ್ಷ್ಮೀಪೂರವಾಡಿಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.