
ಸೇಡಂ,ಮಾ.6-ಕಾಲು ಜಾರಿ ಯುವಕನೋರ್ವ ನದಿಪಾಲಾಗಿರುವ ಘಟನೆ ತಾಲೂಕಿನ ಕಾಚೂರ ಸಮೀಪದ ಕಾಗಿಣಾ ನದಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಸೇಡಂ ಪಟ್ಟಣದ ಶಾಸ್ತ್ರಿ ನಗರದ ನಿವಾಸಿ ರೂಹಾನ್ ತಂದೆ ಮೆಹೇಬೂಬ್ ಅಲಿ (18) ಮೃತ ಯುವಕ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ಸಮಯದಲ್ಲಿ ಕಾಚೂರ ಕಾಗಿಣಾ ನದಿಯಲ್ಲಿ ಕಾಲು ಜಾರಿಬಿದ್ದು ನೀರುಪಾಲಾಗಿದ್ದಾನೆ. ಬಳಿಕ ಸ್ಥಳೀಯ ಪೆÇಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯವರು ಶೋಧ ಕಾರ್ಯ ನಡೆಸಿದರು. ನಿರಂತರ ಶೋಧ ನಡೆಸಿದ ಬಳಿಕ ಸಂಜೆ ಯುವಕನ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಮಳಖೇಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























