
ವಾಡಿ,ಮಾ.11-ಜಿಲ್ಲಾಧಿಕಾರಿಗಳ ಆದೇಶದಂತೆ ವಿಶೇಷ ಮ್ಯಾಪಿಂಗ್ ಅಭಿಯಾನ ಇಂದು ಪ್ರಾರಂಭವಾಗುತ್ತದೆ. ಚಿತ್ತಾಪುರ ಮತಕ್ಷೇತ್ರದಲ್ಲಿ ಒಟ್ಟು 253891 ಮತದಾರರಲ್ಲಿ 241770 ಮತದಾರರ ವಿಶೇಷ ಮಾತಪಟ್ಟಿ ಪರಿಷ್ಕರಣೆ ಮ್ಯಾಪಿಂಗ್ ಮಾಡಲಾಗಿದೆ, ಶೇ 95.23% ಪ್ರಗತಿ ಸಾಧಿಸಿ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ.
ಬಾಕಿ ಉಳಿದ 12121 ಮತದಾರರ ಮ್ಯಾಪಿಂಗ್ ಮಾಡಲು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಆದ್ದರಿಂದ ಮತದಾರರು ನಿಮ್ಮ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‍ಓ ) ಅವರಿಗೆ ಭೇಟಿಯಾಗಿ ಮತ್ತು ನಿಮ್ಮ ಮನೆಗೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಿದಾಗ ಮ್ಯಾಪಿಂಗ್ ಮಾಡಿಕೊಳ್ಳಲು ಚಿತ್ತಾಪುರ ತಾಲ್ಲೂಕಿನ ದಂಡಧಿಕಾರಿ ಹಾಗು ತೆಹಸೀಲ್ದಾರ ನಾಗಯ್ಯ ಹಿರೇಮಠ್ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























