ಸಸಿ ಪೋಷಣೆ ಪರಿಸರ ಸಂರಕ್ಷಣೆ : ಮನೋಜ ಹಿರೇಮಠ

ಕಮಲನಗರ:ಜೂ.6: ಸಸಿ ನೆಟ್ಟು ಮರವಾಗಿ ಬೆರಳೆಸುವುದರಿಂದ ಉತ್ತಮ ಪರಿಸರಕ್ಕೆ ನಾವೂ ಪರೋಕ್ಷ ಕೊಡುಗೆ ನೀಡಿದಂತಾಗುತ್ತದೆ ಎಂದು ಶಾಲೆ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾಷಣ-ಪೆÇೀಷಣೆಗಳಿಂದ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪರಿಸರ ಸಂರಕ್ಷಣೆಗೆ ನೂಜಕಳಕಳಿ ಮತ್ತು ಪ್ರಾಮಾಣಿಕ ಪ್ರಯತ್ನ ಸಹ ಅಗತ್ಯ. ನೆಟ್ಟ ಸಸಿ ಮರವಾಗಿ ಬೆಳೆದಾಗ ಹಲವು ಬಗೆಯಲ್ಲಿ ಉಪಕಾರಿಯಾಗುತ್ತದೆ ಎಂದರು.

ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಸಂಗಮೇಶ್ವರ ಬಿರಾದಾರ ಮಾತನಾಡಿದರು.

ಸಂಗೀತಾ ಕಾಂಬಳೆ, ಶೀತಲ ಹಂಗರಗೆ, ಅಂಜಲಿ ಕಾಂಬಳೆ, ಮಲ್ಲಿಕಾರ್ಜುನ ಮೇತ್ರೆ, ಸುದೀಪ, ದಿನೇಶ, ಸೌಮ್ಯ, ಚೇತನ ಜ್ಞಾನ ಲತಾ, ಚರಣ, ಮಹಾದೇವ, ಸಾಯಿನಾಥ, ಸುಮೀತ, ಸ್ನೇಹಾ, ಸೌರ್ಯ ಹಂಗರಗೆ, ಮಡಿವಾಳಪ್ಪ ಹಾಗೂ ಅನೇಕ ಮುದ್ದು ಮಕ್ಕಳರಿದ್ದರು.