ಚಿಕ್ಕಬಳ್ಳಾಪುರ.ಮೇ೨೧:ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಗೂಳೂರು ವೃತ್ತದಿಂದ ಕೋರ್ಟ್ ವರೆಗೂ ನಡೆದ ಸಿಂಧೂರ ತಿರಂಗಾ ಯಾತ್ರೆ ಏರ್ಪಡಿಸಲಾಗಿದ್ದು ಈ ತಿರಂಗ ಯಾತ್ರೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿರವರು ತಮ್ಮ ಅನುಯಾಯಿಗಳೊಂದಿಗೆ ಪಾಲ್ಗೊಂಡು ಹೆಜ್ಜೆ ಹಾಕಿದರು.
ನಂತರ ಮಾತನಾಡಿದ ಅವರು ಸಿಂಧೂರ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ನನಗೆ ಅತ್ಯಂತ ಮಹತ್ವಪೂರ್ಣ ವಿಚಾರವಾಗಿದೆ ರಾಷ್ಟ್ರಭಕ್ತಿ ಪ್ರೇರೇಪಿಸುವ ಇಂತಹ ಯಾತ್ರೆ ಯುವಜನತೆಯಲ್ಲಿ ಹೆಚ್ಚಿನ ರಾಷ್ಟ್ರಪ್ರೇಮ ಮುಗಿಸುವಂತಹಾಗಲಿ ಎಂದು ಆಶಿಸುತ್ತೇನೆ ಎಂದರು.
ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಮಾಜಿ ಜಿಲ್ಲಾಧ್ಯಕ್ಷರು ಅದ ರಾಮಲಿಂಗಪ್ಪ ರವರು ಹಾಗೂ ಕೋಲಾರದ ಮಾಜಿ ಸಂಸದರಾದ ಮುನಿಸ್ವಾಮಿ ರವರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಮುನಿರಾಜು ಅಣ್ಣನವರು ಇದ್ದರೂ.