
ಸೇಡಂ ,ಮಾ,22:ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ಆಯೋಜಿತ ಸಮರ್ಥ ಭಾರತ ಶ್ರೇಷ್ಠ ಸಂತಾನ ಎಂಬ ವಿನೂತನ ಕಾರ್ಯಕ್ರಮವು ಸ್ಥಳೀಯ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ನಾಗೇಂದ್ರಪ್ಪ ಬಿ ಪಾಟೀಲ್ ಅರೆಬೊಮ್ಮನಹಳ್ಳಿ, ಮಂಗಳಮಂಟಪದಲ್ಲಿ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ಯಾ ಭಾರತೀಯ ಶಿಶು ವಾಟಿಕಾ ದಕ್ಷಿಣ ಮಧ್ಯ ಕ್ಷೇತ್ರೀಯ,ಸಹ ಸಂಯೋಜಕರಾದ ಶ್ರೀಮತಿ ತಾರಾ ಕಾಳಿಚರಣ ಅವರು ನವದಂಪತಿಗಳನ್ನು ಉದ್ದೇಶಿಸಿ ಮಾತನಾಡುತ್ತಾ,ನಾವು ಪಡೆಯುವ ಸಂತತಿಗೆ ಬುದ್ದ ಬಸವನಾಗು, ಸಿದ್ಧ ಶಿವಾಜಿಯಾಗು, ವಿವೇಕಾನಂದನಾಗು ಎಂದು ಹರಸಿ,ನಮ್ಮ ಮಗುವನ್ನು ಮಹಾಸಾಧಕನನ್ನಾಗಿ ಮಾಡುವ ಶ್ರೇಷ್ಠ ಮಾತೆ ಆಗಬೇಕು ಎಂದರು.ಕಾರ್ಯಕ್ರಮದ ಅತಿಥಿಗಳಾದ ಕಲಬುರಗಿಯ ಮಾತೃಛಾಯಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ನಂದಿನಿ ಬೋಸಗಿ ಅವರು ಮಾತನಾಡುತ್ತಾ, ನವದಂಪತಿಗಳಾದ ತಾವು ಯಾವುದೇ ಟೆನ್ಶನ್ ಗೆ ಒಳಗಾಗದೆ ಮಾನಸಿಕ ಧೈರ್ಯವನ್ನು ಹೊಂದಿ,ತಮ್ಮ ಮತ್ತು ತಮ್ಮ ಮಕ್ಕಳ ದೈಹಿಕ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸಬೇಕೆಂದರು.ಅವರು ಮುಂದುವರೆದು ಮಾತನಾಡುತ್ತಾ, ಕುಟುಂಬದ ಎಲ್ಲ ಸದಸ್ಯರ ಜೊತೆ ಉತ್ತಮ ಸಂಬಂಧವನ್ನು ಹೊಂದಿದರೆ ಮಾತ್ರ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬಹುದೆಂದರು.ಇನ್ನೋರ್ವ ಅತಿಥಿಗಳಾದ ಡಾ ರತ್ನಶ್ರೀ ರೇಮಣ್ಣಿ ಅವರು ಮಾತನಾಡುತ್ತಾ,ಗರ್ಭಿಣಿ ಸ್ತ್ರೀಗೆ ಸರಿಯಾದ ಆಹಾರ ಬಹಳ ಮುಖ್ಯ ಎನ್ನುತ್ತಾ,ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಮತೋಲನ ಆಹಾರದ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ,ಕಬ್ಬಿಣ,ಕ್ಯಾಲ್ಸಿಯಂ,ಹಣ್ಣುಗಳು ಮತ್ತು ತರಕಾರಿಗಳು ಮತ್ತು ಅವಶ್ಯಕ ಪ್ರಮಾಣದ ನೀರು ಸೇವನೆಯ ಜೊತೆಗೆ ಜಂಕ್ ಫುಡ್ (ಪಿಜ್ಜಾ, ಬರ್ಗರ್)ಹೆಚ್ಚು ಎಣ್ಣೆ, ಅತಿಯಾದ ಖಾರದ ಆಹಾರ,ಅರೆ ಬೇಯಿಸಿದ ಆಹಾರ ತ್ಯಜಿಸಬೇಕೆಂದರು.ಸಕಾರಾತ್ಮಕ ಶಕ್ತಿ ವೃದ್ಧಿ,ಮನಸ್ಸಿಗೆ ಶಾಂತಿ, ಏಕಾಗ್ರತೆ ಮತ್ತು ಧ್ಯಾನಶಕ್ತಿ ಹೆಚ್ಚಿಸಲು,ಪರಿಸರ ಸ್ವಚ್ಛತೆ ಮತ್ತು ಮಾನಸಿಕ ಒತ್ತಡ ಕಡಿಮೆಗೊಳಿಸುವದಕ್ಕಾಗಿ,ಪರಿಸರ ಸ್ವಚ್ಛತೆಗಾಗಿ ಅಗ್ನಿಹೋತ್ರವೆಂಬ ಪವಿತ್ರ ಪೂಜೆಯಲ್ಲಿ ನವದಂಪತಿಗಳು ಪಾವನ ಸಂಕಲ್ಪಗೈದರು.ಕಾರ್ಯಕ್ರಮವು ವಿದ್ಯಾಮಂದಿರ ಸಿ.ಬಿ.ಎಸ್.ಇ ಶಾಲೆಯ ಮಕ್ಕಳಿಂದ ಪ್ರಾರ್ಥನಾ ನೃತ್ಯದಿಂದ ಪ್ರಾರಂಭಗೊಂಡಿತು.ಶ್ರೀಮತಿ ಅನುರಾಧ ಪಾಟೀಲ,ಕಾರ್ಯದರ್ಶಿಗಳು ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ನಿರೂಪಣೆ ಶ್ರೀಮತಿ ಶೋಭಾ ಪಾಟೀಲ್, ಪ್ರಾಚಾರ್ಯರು ಮತ್ತು ಶ್ರೀಮತಿ ಸ್ನೇಹಲತಾ ಬಾಗೋಡಿ ಶಿಕ್ಷಕಿಯರು, ವಂದನಾರ್ಪಣೆಗೈದರು.




























