
ಸಿಂದಗಿ,ಅ.19: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಶನಿವಾರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಎಲ್ಲಾ ಗಣ ವೇಷಧಾರಿಗಳ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು.
ಅಲ್ಲಿಂದ ಕನಕದಾಸ ವೃತ್ತದ ಮೂಲಕ ನೀಲಗಂಗಾದೇವಿ ದೇವಸ್ಥಾನದ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತದಿಂದ ಜಗದ್ಗುರು ತೊಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ತೆರಳಿ ಟಪ್ಪು ಸುಲ್ತಾನ ವೃತ್ತ, ಡಾ.ಅಂಬೇಡ್ಕರ ವೃತ್ತ, ಅಂಬಿಗರ ಚೌಡಯ ಸಂಗೋಳ್ಳಿ ರಾಯಣ ವೃತ್ತ, ಬಸವೇಶ್ವರ ವೃತ್ತದ ಮುಖಾಂತರ ಆರ್.ಡಿ.ಪಾಟೀಲ ಕಾಲೇಜಗೆ ಪಥ ಸಂಚಲನ ಬಂದು ತಲುಪಿತು.ಎರಡು, ಮೂರು ಕಿ.ಮೀ ಗಣವೇಷಧಾರಿಗಳ ಪಥ ಸಂಚಲನ ನೋಡಲು ಸಾವಿರಾರು ಮಹಿಳೆಯರು ಮಕ್ಕಳು ಹಾಗೂ ಯುವಕರು ರಸ್ತೆ ಎರಡು ಬದಿಗಳಲ್ಲಿ ಜಮಾಯಿಸಿದರು.
ಹಲವು ಕಡೆ ಸಾರ್ವಜನಿಕರು ಹೂವುಗಳನ್ನು ಸ್ವಯಂಸೇವಕರ ಮೇಲೆ ಚೆಲ್ಲುವ ಮೂಲಕ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಬ್ಯಾಂಡ್ ಬಾರಿಸುತ್ತ ಭಾರತ ಮಾತಾ ಕಿ ಜೈ, ಶ್ರೀ ರಾಮ್ ಜೈ ಜೈ ಘೋಷಣೆಗಳು ಮೊಳಗಿದವು.ನಂತರ ಆರ್.ಡಿ.ಪಾಟೀಲ ಪದವಿ ಪೂ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ನಡೆಯಿತು
ಪಥ ಸಂಚಲನದಲ್ಲಿ ಪ್ರಭು ಸಾರಂಗದೇವ ಶಿವಾಚಾರ್ಯರು, ಮಾಜಿ ಶಾಸಕ ರಮೇಶ್ ಬೂಸನೂರ. ವಿ ಪ ಮಾಜಿ ಸದಸ್ಯ ಅರುಣ ಶಾಹಾಪುರ, ಸಂತೋಷ ಪಾಟೀಲ್ ಹಾಗೂ ಅನೇಕರಿದ್ದರು