
ಬೆಂಗಳೂರು,ಜ.೩೧-ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಆದಾಯ ತೆರಿಗೆ(ಐಟಿ) ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಶರಣಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆಗಳಿವೆ.
ಈ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು ವಿಸ್ತೃತ ಮತ್ತು ಆಳವಾದ ತನಿಖೆ ಅಗತ್ಯವಿದೆ ಹಾಗಾಗಿ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಗಳಿವೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಿಐಡಿಯಿಂದ ಇಂದ ಸಮಗ್ರ ತನಿಖೆಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ ಈ ಆತ್ಮಹತ್ಯೆ ಸಂಬಂಧ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಸೀಮಂತ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿಗಳನ್ನು ಪಡೆದುಕೊಂಡಿದ್ದು ಎಲ್ಲ ಆಯಾಮಗಳಿಂದ ತನಿಖೆ ನಡೆಸಲು ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಗಳು ಇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ರಿಯಲ್ ಎಸ್ಟೇಟ್ ವ್ಯವಹಾರ ಐಟಿ ದಾಳಿ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಅಗತ್ಯವಿದೆ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಸಿಜೆ ರಾಯ್ ಅವರು ಬೆಂಗಳೂರು, ಕೇರಳ, ದುಬೈನಲ್ಲೂ ವ್ಯವಹಾರ ನಡೆಸಿದ್ದರು.
ಈ ಪ್ರಕರಣವನ್ನು ಸಿಡಿಐ ತನಿಖೆಗೆ ಒಳಪಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ ಎಲ್ಲ ಬೆಳವಣಿಗೆಗಳ ನಡುವೆಯೇ ಅಶೋಕ್ ನಗರ ಪೊಲೀಸರಿಗೆ ಗ್ರೂಪ್‌ನ ಎಂಡಿ ಟಿಎ ಜೋಸೆಫ್ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ, ರಾಯ್ ಆತ್ಮಹತ್ಯೆಗೆ ಕಾರಣವಾದ ಒತ್ತಡಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಐಟಿ ಅಧಿಕಾರಿಗಳ ಮೇಲೆ ಯಾವುದೇ ನೇರ ಆರೋಪ ಮಾಡಿಲ್ಲ.ಆತ್ಮಹತ್ಯೆಯ ಸಂಬಂಧ ಸಮಗ್ರ ತನಿಖೆ ನಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜೋಸೆಫ್ ಆಗ್ರಹಿಸಿದ್ದಾರೆ.
ಈ ನಡುವೆ ಸಿಜೆ ರಾಯ್ ಅವರ ಸಹೋದರ ಬಾಬು ಅವರು ಮಾತನಾಡಿ, ರಾಯ್ ಕಳೆದ ಕೆಲವು ದಿನಗಳಿಂದ
ಐಟಿ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬಸ್ಥರು ಪ್ರತ್ಯೇಕ ದೂರು ದಾಖಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರ ಹೆಸರು ಉಲ್ಲೇಖ:
ಆತ್ಮಹತ್ಯೆಗೆ ಶರಣಾಗಿರುವ ರಾಯ್ ಅವರು ಬರೆದಿರುವ ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರ ಹೆಸರನ್ನು ಉಲ್ಲೇಖಿಸಿದ್ದಾರೆ.ಡೈರಿ ಬರೆಯುವ ಅಭ್ಯಾಸ ಹೊಂದಿದ್ದ ರಾಯ್ ಅದರಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಹೆಸರುಗಳು, ಜೊತೆಗೆ ಓರ್ವ ಸಂಸದರ ಹೆಸರನ್ನು ಕೂಡ ಬರೆದಿದ್ದಾರೆ.
ಇದಲ್ಲದೆ ಮಾಜಿ ಸಂಸದರು ಚಿತ್ರದ ರಂಗದ ಗಣ್ಯರ ಹೆಸರು ಅನೇಕ ನಟಿಯರು ಮಾಡಲ್‌ಗಳ ಹೆಸರು ಕೂಡ ಉಲ್ಲೇಖ ಮಾಡಿದ್ದಾರೆ. ವ್ಯವಹಾರಿಕವಾಗಿ ಒಂದಷ್ಟು ವಿಚಾರಗಳು ಹಾಗು ಒಪ್ಪಂದಗಳ ಕುರಿತಂತೆ ಕೂಡ ಡೈರಿಯಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ.
ಸಿಜೆ ರಾಯ್ ಕಂಪನಿಯಲ್ಲಿ ಕೆಲ ರಾಜಕಾರಣಿಗಳು ಹೂಡಿಕೆ ಮಾಡಿದ್ದು ಕಳೆದ ಎರಡು ಮೂರು ವರ್ಷಗಳಿಂದ ರಿಯಲ್ ಎಸ್ಟೇಟ್‌ನಲ್ಲಿ ಲಾಭ ಕಡಿಮೆಯಾಗಿತ್ತು ಎಂದು ಹೇಳಲಾಗಿದ್ದು ಈ ಕಾರಣಕ್ಕೆ ಕೆಲ ರಾಜಕಾರಣಿಗಳು ತಮ್ಮ ಹಣವನ್ನು ವಾಪಸ್ ಕೊಡುವಂತೆ ಒತ್ತಡ ಹೇರಿದ್ದರು ಎಂದು ಹೇಳಲಾಗುತ್ತಿದೆ.
ಈ ಆಯಾಮದಿಂದಲೂ ತನಿಖೆ ನಡೆದಿದೆ ಯಾವ ಕಾರಣಕ್ಕೆ ಡೈರಿಯಲ್ಲಿ ಈ ಹೆಸರುಗಳನ್ನ ಬರೆದಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆದಿದೆ ಕೆಲ ಕಾರ್ಯಕ್ರಮಗಳಿಗೆ ನಟಿ ಮಾಡೆಲ್ ಗಳು ಹಾಗೂ ರಾಜಕಾರಣಿಗಳನ್ನ ಕಾಯದಿರಿಸುತ್ತಿದ್ದರು ಹಾಗಾಗಿ ಬರಿ ಇವೆಂಟ್ ವಿಚಾರಕ್ಕೆ ಅಥವಾ ಬೇರೆ ಏನಾದರೂ ಇದೆಯಾ ಎಂಬ ಬಗ್ಗೆ ತನಿಖೆ ನಡೆದಿದ್ದು ಸದ್ಯ ಡೈರಿಯ ಇಂಚಿಂಚು ಮಾಹಿತಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ
ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಪ್ರಕರಣ ಬಗ್ಗೆಬಿಎನ್‌ಎಸ್‌ಎಸ್ ೧೭೪ಛಿ ಅಡಿಯಲ್ಲಿ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಅನುಮಾನಸ್ಪದ ಸಾವು ಅಡಿಯಲ್ಲಿ ಪ್ರಕರಣ ದಾಖಲುಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲಅದ್ದರಿಂದ ಅನುಮಾನಸ್ಪದ ಸಾವಿನ ಬಗ್ಗೆ ತನಿಖೆ ೧೭೪ಛಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ.
ಸಂಜೆ ಅಂತ್ಯಕ್ರಿಯೆ:
ಡಾ.ಸಿಜೆ ರಾಯ್ ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆತಮ್ಮ ಆಪ್ತರ ಬಳಿ ಈ ಹಿಂದೆ ವ್ಯಕ್ತಪಡಿಸಿದ್ದ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ ಡಾ.ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರ ನಡೆಯಲಿದೆ. ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ, ಸಹೋದರ ಬಾಬು ಜೋಸೆಫ್ ಒಡೆತನದ ಕೋರಮಂಗಲದ ವೈಟ್ ಹೌಸ್‌ನಲ್ಲಿ ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.
ಬೌರಿಂಗ್‌ನಲ್ಲಿ ಮರಣೋತ್ತರ ಪರೀಕ್ಷೆ
ಉದ್ಯಮಿ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಮರಣೋತ್ತರ ಪರೀಕ್ಷೆ (ಪೊಸ್ಟ್ಮಾರ್ಟಮ್) ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಫೋರೆನ್ಸಿಕ್ ಪರೀಕ್ಷೆಗೆ ಅನೇಕ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ.ಅರವಿಂದ್ ಎಂ.ಎನ್. ಮಾಧ್ಯಮಗಳೊಂದಿಗೆ ಮಾತನಾಡಿ “ಗುಂಡು ಎದೆಯ ಎಡಭಾಗಕ್ಕೆ ಪ್ರವೇಶಿಸಿದೆ. ಅದು ದೇಹದಿಂದ ಹೊರಬಂದಿಲ್ಲ (ಎಕ್ಸಿಟ್ ಆಗಿಲ್ಲ). ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕಲಾಗಿದೆ” ಎಂದರು.
ಡಾ. ಅರವಿಂದ್ ವಿವರಿಸಿದ ಪ್ರಕಾರ, ಗುಂಡು ಹೃದಯ, ಶ್ವಾಸಕೋಶ ಮತ್ತು ಹೊಟ್ಟೆಯ ಭಾಗಗಳನ್ನು ತಾಗಿದೆ. “ಬುಲೆಟ್ ನಿಂದಲೇ ಮರಣ ಸಂಭವಿಸಿದೆ. ಇದು ೬.೩೫ ಎಂಎಂ ಗುಂಡು. ಇದು ಬೆನ್ನಿನ ಪಕ್ಕೆಲಬು (ರಿಬ್ಸ್) ವರೆಗೆ ಹೋಗಿದ್ದು, ಹೊರಗೆ ಬಂದಿಲ್ಲ. ಶ್ವಾಸಕೋಶದ ಕೆಳಭಾಗ (ಲೋವರ್ ಲೋಬ್)ಕ್ಕೆ ಹಾನಿಯಾಗಿದೆ. ಎದೆಯ ಭಾಗವನ್ನು ಬಿಟ್ಟರೆ ದೇಹದ ಇತರ ಯಾವುದೇ ಭಾಗಕ್ಕೆ ಹಾನಿಯಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಅನೇಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಡಾ. ಅರವಿಂದ್ ಅವರು ನೀಡಿರುವ ಪಿಸ್ತೂಲ್ ಹಿಡಿದಿದ್ದ ಕೈಬೆರಳಿನ ಮೇಲೆ ಗನ್ ಪೌಡರ್ ಇದೆಯೇ ಎಂಬುದನ್ನು ಪರೀಕ್ಷಿಸಲು ಮಾದರಿ ತೆಗೆದುಕೊಳ್ಳಲಾಗಿದೆ.ದೇಹದಿಂದ ರಕ್ತ ಮತ್ತು ಬೆರಳಿನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ.ಈ ಎಲ್ಲ ಮಾದರಿಗಳನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್)ಗೆ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
























