
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನನ್ನ ರಚಿಸಲಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.
ಎಸ್‌ಐಟಿ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿರುವ ಆತ್ಮಹತ್ಯೆ ಇದು. ಐಟಿ ಅಧಿಕಾರಿಗಳನ್ನು ವಿಚಾರಣೆ ಮಾಡಬೇಕಾ ಬೇಡವಾ ಎನ್ನುವುದನ್ನ ತನಿಖಾ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸದ್ಯ ಪ್ರಕರಣ ಸಂಬಂಧ ಸಿಜೆ ರಾಯ್ ಅವರ ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ಸಿಐಡಿಗೆ ರವಾನಿಸಿದ್ದಾರೆ. ಎರಡು ಫೋನ್‌ಗೆ ಪಾಸ್‌ವಾರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕು. ಹೀಗಾಗಿ ಸದ್ಯ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ನ್ನು ರವಾನೆ ಮಾಡಿದ್ದು, ಮೊಬೈಲ್‌ನಲ್ಲಿ ಇರುವ ಮಾಹಿತಿ ರಿಕವರಿ ಮಾಡಲಿದ್ದಾರೆ ಎಂದರು.
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಇದೀಗ ಹಲವು ಮಾಹಿತಿಗಳು ಬಯಲಾಗುತ್ತಿದ್ದು, ಪೊಲೀಸ್ ತನಿಖೆ ವೇಳೆ ಅವರ ಪರ್ಸನಲ್ ಡೈರಿ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲಿ ಅವರು ಬೆಂಗಳೂರಿನ ಪ್ರಭಾವಿ ರಾಜಕಾರಣಿಗಳು, ಚಿತ್ರರಂಗದ ಅನೇಕರ ಜೊತೆ ಒಡನಾಟ ಇರುವುದನ್ನು ಉಲ್ಲೇಖಿಸಿದ್ದಾರೆ
























