ಭಾರತ ಎ ತಂಡದ ಪರ ಆಡಲಿರುವ ರೋಹಿತ್


ಮುಂಬೈ,ಆ.೨೩-ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಇಂಡಿಯಾ ಎ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ಪ್ರವಾಸದ ತಯಾರಿಯ ಭಾಗವಾಗಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಣ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಕಣಕ್ಕಿಳಿಯಲಿದ್ದಾರೆ.
ಏಕೆಂದರೆ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಇನ್ನು ಐಪಿಎಲ್ ನಂತರ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿಕ ಸರಣಿಗೆ ತೆರಳಲಿದೆ. ಅದಕ್ಕೂ ಮುನ್ನ ಸ್ಪರ್ಧಾತ್ಮಕ ಪಂದ್ಯವಾಡಲು ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ. ಅದರಂತೆ ಸೆಪ್ಟೆಂಬರ್-ಅಕ್ಟೋಬರ್ ನಡುವೆ ನಡೆಯಲಿರುವ ಭಾರತ ಎ ತಂಡದ ಸರಣಿಯಲ್ಲಿ ಕಣಕ್ಕಿಳಿಯಲು ಹಿಟ್‌ಮ್ಯಾನ್ ಮುಂದಾಗಿದ್ದಾರೆ.
ಭಾರತ ತಂಡವು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ೨೦ ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಗೂ ಮುನ್ನ ಭಾರತ ಎ ತಂಡ ಆಸ್ಟ್ರೇಲಿಯಾದಲ್ಲಿ ಸರಣಿ ಆಡಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಮುಂಬರುವ ಸರಣಿಗಾಗಿ ಫಿಟ್‌ನೆಸ್ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ಜಿಮ್‌ನಲ್ಲಿ ಹಿಟ್‌ಮ್ಯಾನ್ ಬೆವರಿಳಿಸಲಾರಂಭಿಸಿದ್ದು, ಈ ಮೂಲಕ ಫಿಟ್‌ನೆಸ್‌ನತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದ್ದಾರೆ. ಅಲ್ಲದೆ ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳುವ ಮೂಲಕ ೨೦೨೭ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದಾರೆ ರೋಹಿತ್ ಶರ್ಮಾ.
ಭಾರತ ಆಸ್ಟ್ರೇಲಿಯಾ ಸರಣಿ
ಅಕ್ಟೋಬರ್ ೧೯: ಮೊದಲ ಏಕದಿನ ಪಂದ್ಯ ಪರ್ತ್ ಕ್ರೀಡಾಂಗಣ, ಪರ್ತ್
ಅಕ್ಟೋಬರ್ ೨೩: ಎರಡನೇ ಏಕದಿನ ಪಂದ್ಯ ಅಡಿಲೇಡ್ ಓವಲ್
ಅಕ್ಟೋಬರ್ ೨೫: ಮೂರನೇ ಏಕದಿನ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
ಅಕ್ಟೋಬರ್ ೨೯: ಮೊದಲ ಟಿ೨೦ ಪಂದ್ಯ ಮನುಕಾ ಓವಲ್, ಕ್ಯಾನ್‌ಬೆರಾ
ಅಕ್ಟೋಬರ್ ೩೧: ಎರಡನೇ ಟಿ೨೦ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ
ನವೆಂಬರ್ ೨,: ಮೂರನೇ ಟಿ೨೦ ಪಂದ್ಯ ಬೆಲ್ಲೆರಿವ್ ಓವಲ್, ಹೋಬಾರ್ಟ್
ನವೆಂಬರ್ ೬: ನಾಲ್ಕನೇ ಟಿ೨೦ ಪಂದ್ಯ ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
ನವೆಂಬರ್ ೮: ಐದನೇ ಟಿ೨೦ ಪಂದ್ಯ ದಿ ಗಬ್ಬಾ, ಬ್ರಿಸ್ಬೇಮತ್ತ್