1.35 ಕೋಟಿ ರೂ.ಮೌಲ್ಯದ ಅಕ್ಕಿ, ಲಾರಿ ವಶ

ಕಲಬುರಗಿ,ಡಿ.3-ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ಅರ್ಚನಾ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಬಸವೇಶ್ವರ, ಸಿಬ್ಬಂದಿಗಳಾದ ಶಂಕರಲಿಂಗ, ಬೀರಣ್ಣ, ಲಕ್ಷ್ಮೀಕಾಂತ, ದತ್ತಾತ್ರೇಯ ಅವರು ದಾಳಿ ನಡೆಸಿ 5 ಲಕ್ಷ ರೂ.ಮೌಲ್ಯದ ಲಾರಿ ಮತ್ತು ಅಕ್ಕಿ ಸೇರಿ 1.35 ಕೋಟಿ ರೂ.ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಲಾರಿ ಚಾಲಕನಾದ ಹುಮನಾಬಾದ ತಾಲ್ಲೂಕಿನ ದುಬಲಗುಂಡಿಯ ರಾಜು ತಂದೆ ನರಸಿಂಗರಾವ್ ಮತ್ತು ಲಾರಿ ಮಾಲೀಕ ಝಾಕೀರ್ ತಂದೆ ಪಾಶಾಮಿಯಾ ಚಿದ್ರಿ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ಕಿಯನ್ನು ಯಾದಗಿರಿಯಿಂದ ಮಹಾರಾಷ್ಟ್ರ ಮತ್ತು ಗುಜರಾತಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 28.47 ಲಕ್ಷ ರೂ.ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.