Home ಜಿಲ್ಲೆ ಕಲಬುರಗಿ ಹಳೆಯ ಗೆಳೆಯರ ಸಮ್ಮಿಲನ-ಸಾಧಕರಿಗೆ ಸನ್ಮಾನ

ಹಳೆಯ ಗೆಳೆಯರ ಸಮ್ಮಿಲನ-ಸಾಧಕರಿಗೆ ಸನ್ಮಾನ

ಕಲಬುರಗಿ,ಮಾ.15-ಆಧುನಿಕ ಜೀವನದ ಧಾವಂತದಲ್ಲಿ ಮಾನವ ಸಂಬಂಧಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಸ್ನೇಹವನ್ನು ಉಳಿಸಿಕೊಂಡು ಗೆಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವುದು ಅಪರೂಪದ ಸಂಗತಿಯಾಗಿದೆ ಎಂದು ಪತ್ರಾಗಾರ ಇಲಾಖೆ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.
ನಗರದ ನೂತನ ವಿದ್ಯಾಲಯದ ಸಭಾಭವನದಲ್ಲಿ ಹಳೆ ವಿದ್ಯಾರ್ಥಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಾಧಕರಿಗೆ ಸ್ನೇಹಿತರು ಹಮ್ಮಿಕೊಂಡ ಅಭಿನಂದನಾ ಸಮಾರಂಭವು ಇಂದಿನ ಸಮಾಜದಲ್ಲಿ ಸ್ನೇಹ ಮತ್ತು ಸಂಬಂಧಗಳಿಗೆ ಹೊಸ ಅರ್ಥ ನೀಡಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ವಿದ್ಯಾಲಯದ ಪ್ರಾಂಶುಪಾಲ ಡಾ. ದಯಾನಂದ ಶಾಸ್ತ್ರಿ ವಹಿಸಿದ್ದರು. ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ-ಕಲಬುರಗಿ ಹಾಗೂ ನೂತನ ವಿದ್ಯಾಲಯದ ನಿರ್ದೇಶಕರಾದ ಡಾ. ಗೋವಿಂದ್ ರಾಜ್ ಪೂಜಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಪರಮಾನಂದ ಹಂಗರಗಿ ಹಾಗೂ ಜಿಲ್ಲಾಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿ ಪುರಸ್ಕøತರಾದ ಶ್ರೀನಿವಾಸ ಡಿ. ಜಾಧವ,
ಜ್ನ್ಯಾನ ಜ್ಯೋತಿ ಮತ್ತು ಕಲ್ಯಾಣ ಕರ್ನಾಟಕ ಪ್ರಾಂತ್ಯದ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪಡೆದ ಎ.ಕೆ.ಆರ್. ದೇವಿ ಕಾಲೇಜಿನ ಪ್ರಾಂಶುಪಾಲ ವಿದ್ಯಾಸಾಗರ್ ದೇಶಮುಖ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೀಷಾದ ಮತ್ತು ನಿನಾದ ಮುಡಬಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಡಾ. ಏನ್ ಎಸ್ ಕುಲಕರ್ಣಿ ಸ್ವಾಗತಿಸಿದರು, ಶಿಕ್ಷಕ ಶಂಕರ ಬಿರಾದಾರ ಹಾಗೂ ಬಸವರಾಜ ಭಾಗಾ ಕಾರ್ಯಕ್ರಮ ನಿರೂಪಣೆ ನಡೆಸಿದರು. ದಾನಪ್ಪ ವಗ್ಗಿ ವಂದಿಸಿದರು.
ಡಾ.ಲಿಂಗಾಬಸವ ಪಾಟೀಲ, ಗುಂಡೂರಾವ. ಹುಮನಾಬಾದ , ಶಿವಕುಮಾರ ಪಾಟೀಲ, ಎಂ ಬಿ ರಾಜ್, ನಾಗೇಂದ್ರ ಪೂಜಾರಿ, ಸೂರ್ಯಕಾಂತ ಉಮಾಪುರೆ, ಜಿತೇಂದ್ರ ಬೆಳಗುಂದಿ , ಮಹೇಂದ್ರ ಅಯ್ಯಳಕರ್, ರಾಜೇಶ್ ರಾಸೂರ್, ಸಂಜೀವಕುಮಾರ ಜೋಗ, ಶರಣು ಜೇವರ್ಗಿ ಉಪಸ್ಥಿತರಿದ್ದರು.