Home ಜಿಲ್ಲೆ ಕಲಬುರಗಿ ಸರ್ಕಾರ,ಕೆಕೆಆರ್‍ಡಿಬಿ ಸಹಯೋಗದಲ್ಲಿ ವಿಮಾನ ಸೇವೆ ಪುನಾರಂಭಿಸಿ: ಡಾ ಅಜಯ್ ಸಿಂಗ್

ಸರ್ಕಾರ,ಕೆಕೆಆರ್‍ಡಿಬಿ ಸಹಯೋಗದಲ್ಲಿ ವಿಮಾನ ಸೇವೆ ಪುನಾರಂಭಿಸಿ: ಡಾ ಅಜಯ್ ಸಿಂಗ್

ಕಲಬುರಗಿ,ಮಾ.17: ವಿಧಾನ ಮಂಡಲ ಅಧಿವೇಶನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜರುಗಿದ ಮಹತ್ವದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಸರ್ಕಾರ- ಕೆಕೆಆರ್‍ಡಿಬಿ ಸಹಯೋಗದಲ್ಲಿ ಕಲಬುರಗಿಯಿಂದ ವಿಮಾನ ಸೇವೆಗಳನ್ನು ಪುನಾರಂಭಿಸುವಂತೆ ಸಂಸ್ಥೆಗಳಿಗೆ ಆಗ್ರಹಿಸಿದರು.
ಬೆಂಗಳೂರಿನಿಂದ ಕಲಬುರಗಿ ಮತ್ತು ಬೀದರ್ ನಗರಗಳಿಗೆ ಹಾಗೂ ಅಲ್ಲಿಂದ ಬೆಂಗಳೂರಿಗೆ ವಿಮಾನಯಾನ ಸೇವೆಗಳನ್ನು ರಾಜ್ಯ ಸರ್ಕಾರ ಮತ್ತು ಕೆಕೆಆರ್‍ಡಿಬಿ ಸಹಾಭಾಗೀತ್ವದಲ್ಲಿ ಪುನರಾರಂಭಿಸುವ ಮತ್ತು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
2019 ರಿಂದ ಅಭಿವೃದ್ಧಿಪಡಿಸಿದ ಕಲಬುರಗಿಯಲ್ಲಿ 742 ಎಕರೆ ಭೂಮಿ ಸೇರಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ವಹಿಸುವ ಸೌಲಭ್ಯಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುವ ಕುರಿತು ಚರ್ಚೆಗಳು ನಡೆದವು. ಎಲ್ಲಾ ವಿಮಾನಗಳ ಕಾರ್ಯಾಚರಣೆಗೆ ನಾವು ಬದ್ಧರಾಗಿದ್ದೇವೆ ಎಂದು ವಿಮಾನಯಾನ ನಿರ್ವಾಹಕ ಸಂಸ್ಥೆಗಳ ಪ್ರತಿನಿಧಿಗಳು ಹೇಳಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬೆಂಗಳೂರಿಗೆ ದೈನಂದಿನ ಸೇವೆಗಳಿಗಾಗಿ ಅಭಿವೃದ್ಧಿಪಡಿಸುವ, ಬೀದರ್‍ಗೆ ಬೆಳಗಿನ ಸೇವೆಗಳು ಮತ್ತು ಬೆಂಗಳೂರಿನಿಂದ ಕಲಬುರಗಿಗೆ ಸಂಜೆ ಸೇವೆಗಳನ್ನು ನೀಡಲು ಯೋಜಿಸುತ್ತಿರುವ ಬಗ್ಗೆ ವಿಮಾನ ಸೇವೆ ಸಂಸ್ಥೆಗಳು ಹೇಳಿವೆ.