
ಭಾಲ್ಕಿ:ಫೆ.3: ಗ್ರಾಮೀಣ ಭಾಗದಲ್ಲಿ ಅಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಗೆ ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಸಂದಿರುವುದು ಸಂತಸ ತರಿಸಿದೆ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಹೇಳಿದರು.
ತಾಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠದಲ್ಲಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಸೋಮವಾರ ಆಯೋಜಿಸಿದ್ದ
ಗೌರವ ಡಾಕ್ಟರೇಟ್ ಪುರಸ್ಕøತ ಡಾ.ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪೂಜ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗಡಿಯಲ್ಲಿ ಧರ್ಮ ಸೇವೆ ಜತೆಗೆ ಪೂಜ್ಯರು ಕನ್ನಡದ ಕಾರ್ಯಗಳಿಗೆ ಸದಾ ಪೆÇ್ರೀತ್ಸಾಹ ನೀಡುತ್ತ ಬಂದಿದ್ದಾರೆ. ಅವರ ಸೇವೆಗೆ ಇನ್ನಷ್ಟು ಗೌರವ ಸನ್ಮಾನ, ಪ್ರಶಸ್ತಿ ಹರಿದು ಬರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಉಪಾಧ್ಯಕ್ಷ ರಾಜಕುಮಾರ ಪಾಟೀಲ್ ಖಾನಾಪೂರ, ಯುವ ಘಟಕದ ಅಧ್ಯಕ್ಷ ಸುದೀಪ ತೂಗಾವೆ, ತಾಲೂಕು ಅಧ್ಯಕ್ಷ ಬಸವರಾಜ ಕಾರಬಾರಿ, ಪ್ರಮುಖರಾದ ಪ್ರಶಾಂತ ಹಣಮಶೆಟ್ಟಿ, ಗಿರೀಶ ಕುಲಕರ್ಣಿ, ರಮೇಶ, ರಾಜಕುಮಾರ ಚಲುವಾ, ಕಾಶಿನಾಥ ಚಳಕಾಪೂರೆ, ರಾಜಕುಮಾರ ಕುಂಬಾರ, ಸಂದೀಪ ಕೋಟೆ, ದತ್ತು ಪಾಟೀಲ್, ಸಂಗಮೇಶ ಪಟ್ನೆ, ಸಂಗಮೇಶ ಮಾರ್ಗೆ ಸೇರಿದಂತೆ ಹಲವರು ಇದ್ದರು.






























