
ಬೆಂಗಳೂರು,ಜ೨೮:ಬಿಬಿಸಿ ಮೀಡಿಯಾ ಆಕ್ಷನ್ ತನ್ನ ಇನ್ ವ್ಯಾಲ್ಯುಯಬಲ್ಸ್ ಉಪಕ್ರಮದ ಭಾಗವಾಗಿ ಹೊಸ ವರ್ಷದ ‘ರೀಸೈಕಲ್ ರೆಸೊಲ್ಯೂಷನ್ಸ್’ ಎಂಬ ಹೊಸ ವರ್ಷದ ಅಭಿಯಾನ ಪ್ರಾರಂಭಿಸಿದೆ.
‘ರೀಸೈಕಲ್ ರೆಸೊಲ್ಯೂಷನ್ಸ್’ ನಾಗರಿಕರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅವರಿಗೆ ಡಬ್ಬಾ ತೊಳೆಯಿರಿ, ಹಳೆಯ ಬಟ್ಟೆ ತೆಗೆದುಕೊಳ್ಳಿ ಮತ್ತು ಕೆಂಪು ಗುರುತು ಮಾಡಿ ಈ ಮೂರು ಅಭ್ಯಾಸಗಳು ಇದ್ದಲ್ಲಿ ಹೊಸ ಪ್ರತಿಜ್ಞೆಗಳ ಅಗತ್ಯವಿಲ್ಲ. ಅವರನ್ನು ಒಂದು ಸರಳ, ಸಾಮೂಹಿಕ ರಿಮೈಂಡರ್ ಅಡಿ ತರುತ್ತಿದ್ದೇವೆ.
ಈ ಪೂರ್ವಸಾಧಿತ ವರ್ತನೆಗಳನ್ನು ನವೀಕರಿಸಿದ ಹೊಸ ವರ್ಷದ ಭರವಸೆಗಳಾಗಿ ರೂಪಿಸುವ ಮೂಲಕ ಈ ಅಭಿಯಾನವು ಹಬ್ಬದ ಋತುವಿನ ಆಚೆಗೂ ಬದಲಾವಣೆಯನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದು ಮನೆಯಲ್ಲಿನ ಸಣ್ಣ, ಸ್ಥಿರವಾದ ಕ್ರಮಗಳು ಬೆಲೆ ಕಟ್ಟಲಾಗದ ರೀಸೈಕ್ಲರ್ ಗಳು ಎಂದು ಖ್ಯಾತಿ ಪಡೆದ ಕಸ ಆಯುವವರ ನೇರ ಸುರಕ್ಷತೆ ಮತ್ತು ಘನತೆಗೆ ಪ್ರಭಾವಿಸುತ್ತವೆ. ಈ ನೆನಪಿನ ಓಲೆಯು #ಇನ್ ವ್ಯಾಲ್ಯುಯಬಲ್ಸ್ ಅಡಿಯಲ್ಲಿ ಹಿಂದಿನ ಉಪಕ್ರಮಗಳ ಯಶಸ್ಸಿನ ಮೇಲೆ ನಿರ್ಮಾಣವಾಗಿದ್ದು ಈ ಪ್ರತಿನಿತ್ಯದ ಅಭ್ಯಾಸಗಳು ಮುಂದಕ್ಕೆ ಕೊಂಡೊಯ್ಯಬಹುದಾದ ಪ್ರತಿನಿತ್ಯದ
ಇನ್ ವ್ಯಾಲ್ಯುಯಬಲ್ಸ್ ಅಭಿಯಾನದ ಬಹಳ ಕಾಲದ ಬೆಂಬಲಿಗ ಸಂಗೀತಗಾರ ವಾಸು ದೀಕ್ಷಿತ್, “ನಿಜವಾದ ಬದಲಾವಣೆಗೆ ದೊಡ್ಡ ನಡೆಯ ಅಗತ್ಯವಿಲ್ಲ. ಇದು ಸಣ್ಣ, ದೈನಂದಿನ ಕ್ರಮಗಳು. ನಾವು ನಮ್ಮ ಕಸವನ್ನು ಜವಾಬ್ದಾರಿಯುತಾಗಿ ನಿರ್ವಹಿಸಿದರೆ ನಾವು ನಮ್ಮ ಕಸ ಆಯುವವರ ಕೆಲಸವನ್ನು ಸುರಕ್ಷಿತ ಮತ್ತು ಹೆಚ್ಚು ಘನತೆಯುಕ್ತವಾಗಿಸುತ್ತೇವೆ. ‘ರೀಸೈಕಲ್ ರೆಸೊಲ್ಯೂಷನ್ಸ್’ ಈಗಾಗಲೇ ಕೆಲಸ ಮಾಡುತ್ತಿರುವ ಈ ಸರಳ ಅಭ್ಯಾಸಗಳನ್ನು ನೆನಪಿಸುವುದಾಇದೆ ಮತ್ತು ಅವರನ್ನು ಮುಂದುವರಿಸಲು ಅದೇ ಕಾರಣವಾಗಿದೆ” ಎಂದರು.
೨೦೨೧ರಿಂದಲೂ ಈ ಅಭಿಯಾನದೊಮದಿಗೆ ಗುರುತಿಸಿಕೊಂಡಿರುವ ಕಾಮಿಡಿಯನ್ ಅಯ್ಯೊ ಶ್ರದ್ಧಾ, “ಬಹಳಷ್ಟು ತೀರ್ಮಾನಗಳು ಫೆಬ್ರವರಿಯಲ್ಲಿ ಮರೆತು ಹೋಗುತ್ತವೆ. ಆದರೆ ಇವುಗಳು? ಅವು ಸರಳವಾಗಿವೆ. ನಿಮ್ಮ ಡಬ್ಬಾ ತೊಳೆಯಿರಿ, ಹಳೆಯ ಬಟ್ಟೆಗಳನ್ನು ಒಣ ತ್ಯಾಜ್ಯ ಕೇಂದ್ರಗಳಿಗೆ ಕಳುಹಿಸಿ ಮತ್ತು ಅವರಿಗೆ ಕಸ ಆಯುವವರ ಕೆಲಸವನ್ನು ಸುರಕ್ಷಿತ ಮತ್ತು ಘನತೆಯುಕ್ತವಾಗಿಸಲು ನೆರವಾಗಿರಿ. ‘ರೀಸೈಕಲ್ ರೆಸೊಲ್ಯೂಷನ್ಸ್’ ನಮ್ಮ ಪಾರಿಸರಿಕ ಪರಿಣಿತರಿಗೆ ಒಂದು ಬಗೆಯ ಭರವಸೆಯಾಗಿದೆ. ನಾವು ವಾಸ್ತವವಾಗಿ ಈ ಭರವಸೆಗಳನ್ನು ಕಾಪಾಡಿಕೊಳ್ಳಬೇಕು” ಎಂದರು.
ಈ ಬಿಡುಗಡೆ ಕುರಿತು ಬಿಬಿಸಿ ಮೀಡಿಯಾ ಆಕ್ಷನ್ ಭಾರತದ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಸೋಮಾ ಕತಿಯಾರ್, “ಹೊಸ ವರ್ಷವು ನಮಗೆ ಮರುಬಳಕೆಯನ್ನು ನೆನಪಿಸುವ ಶಕ್ತಿಯುತ ವರ್ತನೆಯ ಬದಲಾವಣೆಯನ್ನು ತಂದಿದ್ದು ಈ ಕ್ರಮಗಳು ತೀರ್ಮಾನಗಳಾಗಬೇಕು, ಇದರಿಂದ ಅವು ಅಭಿಯಾನದ ಧ್ವನಿಯಾಗಿ ಅಳಿಸಿ ಹೋಗುವುದಿಲ್ಲ ಬದಲಿಗೆ ಅವುಗಳನ್ನು ಪ್ರತಿನಿತ್ಯದ ರೂಢಿಯಲ್ಲಿ ಹೊಂದಿಸಿಕೊಳ್ಳಲಾಗುತ್ತದೆ ಎಂದರು.
ಇದರ ವಿಸ್ತಾರ ಪ್ರಾಮುಖ್ಯತೆ ಕುರಿತು ಬಿಬಿಸಿ ಮೀಡಿಯಾ ಆಕ್ಷನ್ ಭಾರತದ ಕಂಟ್ರಿ ಡೈರೆಕ್ಟರ್ ವರಿಂದರ್ ಕೌರ್ ಗಂಭೀರ್, “ಇನ್ ವ್ಯಾಲ್ಯುಯಬಲ್ಸ್ ಸದಾ ನಾಗರಿಕರಿಗೆ ನಮ್ಮ ತ್ಯಾಜ್ಯ ವ್ಯವಸ್ಥೆಯ ಹಿಂದಕ್ಕೆ ನೋಡಲು ಮತ್ತು ಕಾಳಜಿಯಿಂದ ನಡೆದುಕೊಳ್ಳಲು ನೆರವಾಗುವುದಾಗಿದೆ. ಎಂದರು.
ಈ ವಾರ ರೀಸೈಕಲ್ ರೆಸೊಲ್ಯೂಷನ್ಸ್ ಹೊರಾಂಗಣಗಳಲ್ಲೂ ಪ್ರಾರಂಭಿಸಲಾಗಿದ್ದು ಅದು ನಗರದ ಪ್ರಮುಖ ಪ್ರದೇಶಗಳ ಬಸ್ ನಿಲ್ದಾಣಗಳು ಮತ್ತು ನಮ್ಮ ಮೆಟ್ರೋಗಳಲ್ಲಿ ನಡೆಸುವ ಮೂಲಕ ಪ್ರತಿನಿತ್ಯ ಸಂಚರಿಸುವರಿಗೆ ಕಾಣುವಂತೆ ಮತ್ತು ತಲುಪುವಂತೆ ಮಾಡಲಾಗುತ್ತಿದೆ. ಇದನ್ನು ಸದ್ಯದಲ್ಲೇ ನಗರದ ಹಲವಾರು ಅಪಾರ್ಟ್ಮೆಂಟ್ ಗಳ ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ.
























