
ಬೆಂಗಳೂರು ಫೆ. ೧೦ – ಕನ್ನಡಿಗ ಚಂದನ್ ಕುಮಾರ್ ಹತ್ಯೆ ಕೆನಡಾದಲ್ಲಿ ಆಗಿದೆ. ಯಾವ ಕಾರಣಕ್ಕಾಗಿ ಹತ್ಯೆ ಆಗಿದೆ ಅಂತ ಮಾಹಿತಿ ಸಿಕ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಚಂದನ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಅವರ ತಂದೆ ತಾಯಿಗೆ ಒಬ್ಬನೇ ಮಗ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.
ಚಂದನ್ ಕುಮಾರ್ ಬಹಳ ಪ್ರತಿಭಾವಂತ ಹುಡುಗ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದ ಹತ್ಯೆ ಪ್ರಕರಣದ ಬಗ್ಗೆ ಅಲ್ಲಿ ತನಿಖೆ ಮಾಡ್ತಿದ್ದಾರೆ. ಕೆನಡಾ ನಿಯಮಗಳು ಏನಿದೆಯೋ ನೋಡಬೇಕು ಎಂದರು.
ಮೃತ ದೇಹ ತರುವ ಬಗ್ಗೆ ನಮ್ಮ ದೇಶದ ಹೈಕಮಿಷನರ್ ಮಾತುಕತೆ ನಡೆಸುತ್ತಿದ್ದಾರೆ. ಇನ್ನೂ ಮೂರ್ನಾಲ್ಕು ದಿನದಲ್ಲಿ ಮೃತ ದೇಹ ಇಲ್ಲಿ ತರಬಹುದು ಎಂದು ಹೇಳಿದರು.
ನೆಲಮಂಗಲದಲ್ಲಿ ಚಿನ್ನದ ಸರ ಕಳವು ಪ್ರಕರಣ, ಮಹಿಳೆ ಸಾವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈಗ ನೆಲಮಂಗಲಕ್ಕೇ ಹೋಗ್ತಿದೀನಿ. ಅಲ್ಲಿಗೇ ಪೊಲೀಸ್ ಅಧಿಕಾರಿಗಳು ಬರ್ತಾರೆ. ಈ ಪ್ರಕರಣದ ಬಗ್ಗೆಯೂ ಮಾಹಿತಿ ಪಡೀತೇನೆ ಎಂದರು.
ಪದೇಪದೇ ಸಿಎಂ ಬದಲಾವಣೆ ವಿಚಾರ ಕೇಳಬೇಡಿ. ಅದು ಬಿಟ್ಟು ಬೇರೇನಾದ್ರೂ ಕೇಳಿ ಅಂದ ಪರಮೇಶ್ವರ್. ಮಾಜಿ ನಕ್ಸಲರ ಬೇಡಿಕೆ ಇನ್ನೂ ಈಡೇರದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ.
ನಾವು ಮೂರು ಜನ ಪ್ರಾಸಿಕ್ಯೂಟರ್‌ಗಳನ್ನು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿಯಲ್ಲಿ ನೇಮಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಆದಷ್ಟು ಬೇಗ ಅವರ ಕೇಸ್ ಗಳನ್ನು ಇತ್ತರ್ಥ ಪಡಿಸಬೇಕು ಸರೆಂಡರ್ ಆಗುವಾಗ ಅವರು ಸಹ ಅದನ್ನೇ ಬೇಡಿಕೆ ಇಟ್ಟಿದ್ದರು ಎಂದರು.
ಕೇಸ್‌ಗಳ ವಿಚಾರಣೆಗೆ ವೇಗ ಕೊಡ್ತೇವೆ. ಕೇಸ್‌ಗಳನ್ನು ವಾಪಸ್ ತಗೊಳ್ಳೋ ಪ್ರಕ್ರಿಯೆಗೆ ವೇಗ ಕೊಡ್ತೇವೆ ಎಂದು ಹೇಳಿದರು. ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಎಸ್‌ಐಟಿ ತನಿಖೆ ವಿಚಾರ ತನಿಖೆ ಮಾಡ್ತಿದ್ದಾರೆ. ಅನೇಕ ಮಾಹಿತಿಗಳನ್ನು ದುಬೈಯಿಂದಲೂ ಪಡೆಯಬೇಕು, ಐಟಿ ವಿಚಾರವೂ ಇದೆ. ಅದೆಲ್ಲ ನೋಡಿ ತನಿಖೆ ಮಾಡ್ತಾರೆ.
ಡೆತ್ ನೋಟ್ ಏನೂ ಇಲ್ಲ ಅಂತ ಹೇಳಿದ್ದಾರೆ. ಡೈರಿಗಳನ್ನು ವಶಕ್ಕೆ ಪಡೆದಿದ್ದಾರೆ. ಐಟಿ ಅಧಿಕಾರಿಗಳ ವಿಚಾರಣೆ ಮಾಡೋದು ಎಸ್‌ಐಟಿಗೆ ಬಿಟ್ಟ ವಿಚಾರ ತನಿಖೆ ವರದಿ ಬರೋವರೆಗೂ ನಾವು ಏನೂ ಹೇಳಲು ಆಗಲ್ಲ ಎಂದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅವರು ಕೆಪಿಸಿಸಿ ಅಧ್ಯಕ್ಷರು, ಎರಡು ಇಲಾಖೆಗಳ ಹೊಣೆ ಇದೆ. ಹಲವು ಸಭೆಗಳನ್ನು ದೆಹಲಿಯಲ್ಲಿ ಫಿಕ್ಸ್ ಮಾಡಿಕೊಂಡು ಇರ್ತಾರೆ, ಹೋಗ್ತಾರೆ. ದೆಹಲಿಗೆ ಹೋಗೋದೇ ದೊಡ್ಡ ವಿಚಾರ ಅಲ್ಲ ಎಂದರು.

























