ಬಾಪೂರ- ಮಹಿಬೂಬನಗರ್ ರಾಷ್ಟ್ರೀಯ ಹೆದ್ದಾರಿಗೆ ಮರು ಟೆಂಡರ್ಬೈಪಾಸ್ ರಸ್ತೆ ಕಾಮಗಾರಿಗೆ ಮರು ಜೀವ

ಚಿಂಚೋಳಿ:ಜ.31: ಬಾಪೂರ- ಮಹಿಬೂಬನಗರ್ ರಾಷ್ಟ್ರೀಯ ಹೆದ್ದಾರಿ167( ಎನ್)ರ ಚಿಂಚೋಳಿಯಿಂದ ಮಿರಿಯಾಣ ಗಡಿವರೆಗೆ ರಸ್ತೆ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿವು ಭೂಸಾರಿಗೆ ಸಚಿವಾಲಯದ
ಅಧಿಕಾರಿಗಳು ಯೋಜನೆಗೆ ಖಾಸಗಿಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿ ಟೆಂಡರ್ ಕರೆದಿದ್ದರು. ಕೇಂದ್ರದ ಶೇ 40 ಮತ್ತು ಖಾಸಗಿ ಸಹಭಾಗಿತ್ವದ ಶೇ 60ರ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.
ಚಿಂಚೋಳಿಯಿಂದ ತೆಲಂಗಾಣ ಗಡಿವರೆಗೆ 15.8 ಕಿ.ಮೀ ರಸ್ತೆ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ಕಾಮಗಾರಿಯ
ಭೂಸ್ವಾಧೀನ ವಿಳಂಬ ನೆಪಮಾಡಿ ಕೇಂದ್ರದ ಭೂಸಾರಿಗೆ ಸಚಿವಾಲಯ
ಜ.6ರಂದು ಅಧಿಸೂಚನೆ ಹೊರಡಿಸಿ ಟೆಂಡರನ್ನು ರದ್ದುಪಡಿಸಿತು ಮತ್ತೆ ಈಗ ಭೂಸಾರಿಗೆ ಸಚಿವಾಲಯದ
ಅಧಿಕಾರಿಗಳು ಮರು ಟೆಂಡರ್ ಜನವರಿ29 ಕಾರ್ಯಕ್ರಮದ ಟೆಂಡರ್ ಆಗಿದೆ ಎಂದು
ಹುಮ್ನಾಬಾದ್ ಉಪ ವಿಭಾಗದ ಸಾಹಾಯಕ ಕಾರಣವಾಕ ಅಭ್ಯಂತರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಇಂದುದಾರ ಮಂಗಲಗಿ, ಅವರು ಸಂಜೆವಾಣಿಯ ಪತ್ರಿಕೆ ವರದಿಗಾರರ ಜೊತೆಗೆ ಮಾತನಾಡಿಬಾಪೂರ- ಮಹಿಬೂಬನಗರ್ ರಾಷ್ಟ್ರೀಯ ಹೆದ್ದಾರಿ167( ಎನ್)ರ ಚಿಂಚೋಳಿಯಿಂದ ಮಿರಿಯಾಣ ಗಡಿವರೆಗೆ ರಸ್ತೆ ವಿಸ್ತರಣೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿವು ಭೂಸಾರಿಗೆ ಸಚಿವಾಲಯದ ಟೆಂಡರ್ ಕ್ಯಾನ್ಸಲ್ ಆಗಿದೆ ಎಂದು ಚಿಂಚೋಳಿ ತಾಲೂಕಿನಲ್ಲಿ ಗೊಂದಲ ಸುಸ್ತಿಯಾಗಿತ್ತು ಆದರೆ ಮತ್ತೆ ಜನವರಿ 29ನೇ ತಾರೀಕ ರಂದು ಮರು ಟೆಂಡರ್ ಮೊತ್ತ 405 ಕೋಟಿ ಕಾಮಗಾರಿ ಆಗಿದ್ದು ಈಗಾಗಲೇ ಲ್ಯಾಂಡ್ ಲೊಕೇಶನ್ ಮಾಡಲಾಗುತ್ತಿದ್ದು ಲ್ಯಾಂಡ್ ಲೊಕೇಶನ್ ಮಾಡಲಾಗಿದೆ ಮೇಲೆ ಅಗ್ರಿಮೆಂಟ್ ಮಾಡಿ ಏಜೆನ್ಸಿ ಅವರು ಕಾಮಗಾರಿ ಚಾಲ ಮಾಡಲಾಗುವುದು ಎಂದು ಇಂದುದಾರ ಮಂಗಲಗಿ, ಅವರು ಹೇಳಿದರು