1.33 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ನ.19-ನಗರದ ಖಾಜಾ ಕಾಲೋನಿಯ ಮನೆಯೊಂದರಲ್ಲಿ ಶೆಟರ್ ಕೋಣೆಯಲ್ಲಿ ಸಾರ್ವಜನಿಕರಿಗೆ ವಿತರಿಸಿದ ಪಡಿತರ ಅಕ್ಕಿ ಹಾಗೂ ಸರಕಾರದ ಇತರೆ ಯೋಜನೆ ಅಡಿಯಲ್ಲಿ ವಿತರಿಸಲಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಹಾಗೂ ರೋಜಾ ಪೊಲೀಸ್ ಠಾಣೆಯ ಎಎಸ್‍ಐಗಳಾದ ದಾಮೋದರ, ನರ್ಮದಾ, ಫಜಲ್ ರೆಹಮಾನ್, ಸಿಬ್ಬಂದಿ ಹಮಿದೊದ್ದೀನ್ ಅವರು ದಾಳಿ ನಡೆಸಿ ಗುಲಶನ್ ಅರಾಫತ್ ಕಾಲೋನಿಯ ಜಮೀರ್ ತಂದೆ ಯುಸೂಫ್ (38) ಎಂಬಾತನನ್ನು ವಶಕ್ಕೆ ಪಡೆದು 1,33, 280 ರೂ.ಮೌಲ್ಯದ 40 ಕೆಜಿ ತೂಕವುಳ್ಳ 98 ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.