Home ಜಿಲ್ಲೆ ಕಲಬುರಗಿ 1.08 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಜಪ್ತಿ

1.08 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಮಾ.11-ತಾಲ್ಲೂಕಿನ ನದಿ ಸಿನ್ನೂರ ಗ್ರಾಮದ ಕಟ್ಟಡ ಒಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ತಹಶೀಲ್ದಾರ ಕಚೇರಿ ಆಹಾರ ನಿರೀಕ್ಷಕ ನವೀನ್ ಎಂ.ಅವರು ದಾಳಿ ನಡೆಸಿ 40-50 ಕೆ.ಜಿ.ತೂಕದ, 1,08,000 ರೂ.ಮೌಲ್ಯದ 62 ಚೀಲ ಅಕ್ಕಿ ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ ಇಟ್ಟ ಧರ್ಮಣ್ಣ ಎಂಬುವವರ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.