Home ಜಿಲ್ಲೆ ಬೆಂಗಳೂರು ರಾಮಲಿಂಗಪ್ಪರ ಜನ್ಮದಿನ-ಅನ್ನದಾನ ಕಾರ್ಯಕ್ರಮ

ರಾಮಲಿಂಗಪ್ಪರ ಜನ್ಮದಿನ-ಅನ್ನದಾನ ಕಾರ್ಯಕ್ರಮ

ಭಾಗ್ಯನಗರ, ಮಾ೪: ರಾಜಕೀಯ ಎಂದರೆ ಕೇವಲ ಅಧಿಕಾರವಲ್ಲ, ಅದು ಸಮಾಜದ ನೋವಿಗೆ ಸ್ಪಂದಿಸುವ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಪಕ್ಷದ ಯುವ ಮುಖಂಡ ನರೇಶ್ ರಾಯಲ್ ತಿಳಿಸಿದರು.


ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷರು ಹಾಗ ಸಮಾಜ ಸೇವಕರಾದ ರಾಮಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ಬಾಗೇಪಲ್ಲಿ ಪಟ್ಟಣದ ಗೂಳೂರು ಸರ್ಕಲ್‌ನಲ್ಲಿ ಅಭಿಮಾನಿಗಳು ಅನ್ನದಾನ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ರಾಮಲಿಂಗಪ್ಪ ಅವರು ರಾಜಕೀಯ ಕ್ಷೇತ್ರದಲ್ಲಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದವರು. ಆದರೆ ಅದಕ್ಕಿಂತ ಮುಖ್ಯವಾಗಿ ಅವರು ಸಮಾಜದ ಕಷ್ಟಗಳಿಗೆ ಸ್ಪಂದಿಸಿದ ಹೃದಯವಂತರು. ಅವರ ಜೀವನ ಶೈಲಿ ನಮಗೆ ಪ್ರೇರಣೆ”. ನಾಯಕನ ಜನ್ಮದಿನ ಎಂದರೆ ಹೂಗುಚ್ಛಗಳ ಪ್ರದರ್ಶನವಲ್ಲ, ಹಸಿದವರ ಹೊಟ್ಟೆತುಂಬಿಸುವುದೇ ನಿಜವಾದ ಗೌರವ ಎಂದು ತಿಳಿಸಿದರು.


ಬೆಳಗ್ಗಿನಿಂದಲೇ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿ, ಸೇವೆಯೇ ಶ್ರೇಷ್ಠ ಆಚರಣೆ ಎಂಬ ಸಂಕಲ್ಪದೊಂದಿಗೆ ಅನ್ನಸಂತರ್ಪಣೆಯನ್ನು ಆರಂಭಿಸಿದರು. ಬಡವರು, ದೈನಂದಿನ ಕೂಲಿ ಕಾರ್ಮಿಕರು, ವೃದ್ಧರು ಹಾಗೂ ಪ್ರಯಾಣಿಕರಿಗೆ ಪ್ರೀತಿಯಿಂದ ಊಟ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಯುವ ಕಾರ್ಯಕರ್ತರು, ಮಹಿಳಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕೆಲವರು ರಾಮಲಿಂಗಪ್ಪ ಅವರ ಸರಳತೆ, ಜನಸಾಮಾನ್ಯರೊಂದಿಗೆ ಹೊಂದಿರುವ ಆತ್ಮೀಯತೆ ಹಾಗೂ ಸೇವಾ ಮನೋಭಾವವನ್ನು ಸ್ಮರಿಸಿ ಭಾವುಕರಾದ ಕ್ಷಣಗಳು ಕಂಡುಬಂದವು. ರಾಮಲಿಂಗಪ್ಪ ಅವರ ದೀರ್ಘಾಯುಷ್ಯ, ಆರೋಗ್ಯ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನೆರವೇರಲೆಂದು ಅಭಿಮಾನಿಗಳು ಹಾರೈಸಿದರು.


ಒಟ್ಟಿನಲ್ಲಿ, ರಾಜಕೀಯ ಮೌಲ್ಯಗಳು ಮತ್ತು ಮಾನವೀಯತೆ ಒಂದಾಗುವ ಅಪೂರ್ವ ಕ್ಷಣಕ್ಕೆ ಬಾಗೇಪಲ್ಲಿ ಸಾಕ್ಷಿಯಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳಾದ ಅಂಜನಪ್ಪ, ಚಂದ್ರಮೋಹನ್ (ಎಸ್.ಟಿ. ಬಾಬು), ಗೂಳೂರು ಲಕ್ಷ್ಮೀನಾರಾಯಣ, ಅಂಬರೀಷ, ಮಧು, ಲೊಕೇಶ್, ಸುಬ್ರಮಣಿ, ಮಹೇಶ್, ವನಜ, ಗಂಗುಲಮ್ಮ, ನಿರ್ಮಲಮ್ಮ, ವೆಂಕಟಲಕ್ಷ್ಮಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.