
ಕಲಬುರಗಿ:ಮೇ.7: ನಗರದ ಸುವರ್ಣ ಭವನ (ಕನ್ನಡ ಭವನ)ದಲ್ಲಿ ಬುಧವಾರ ಶ್ರೀ ದಾನೇಶ್ವರಿ ಸೇವಾ ಸಂಸ್ಥೆ (ರಿ.) ವತಿಯಿಂದ ಸಂಸ್ಥೆಯ 11ನೇ ವಾರ್ಷಿಕೋತ್ಸವ ಅಂಗವಾಗಿ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ, ರೈತ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ಉಚಿತ ಟೈಲರಿಂಗ್ ತರಬೇತಿ ಉದ್ಘಾಟನಾ ಸಮಾರಂಭ ಹಾಗೂ 5 ಜನ ಪ್ರಗತಿಪರ ರೈತ ಮಹಿಳೆಯರಿಗೆ “ರೈತ ಸೇವಾ ಶ್ರೀ” ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಆರ್. ಹಿರೇಮಠ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ವಿಶೇಷವಾಗಿ ರೈತ ಮಹಿಳೆಯರ ಸಾಧನೆಯನ್ನು ಗುರುತಿಸಿ ರೈತ ಮಹಿಳೆಯರಿಗೆ “ರೈತ ಸೇವಾ ಶ್ರೀ” ಪ್ರಶಸ್ತಿ ಪ್ರದಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ಡಾ. ಸುಧಾ ಹಾಲಕಾಯಿ, ವಿಜಯಕುಮಾರ ಪಾಟೀಲ ತೆಗಲತಿಪ್ಪಿ, ಜ್ಯೋತಿ ಎಂ. ಮರಗೋಳ, ಬಾಬುರಾವ ಪಾಟೀಲ್, ವೀರಸ್ವಾಮಿ, ರಾಚೂಟಯ್ಯ ಹಿರೇಮಠ, ವಿಶ್ವನಾಥ ಸಾಲಿಮಠ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರಾದ ಸುಧಾಕರ ಎಂ. ಇಟಗಿ, ನಾಗಮ್ಮ ಸಿ. ಮಠಪತಿ, ನೀಲಮ್ಮ ಬಿ. ಹಿರೇಮಠ ಸೇರಿದಂತೆ ಸದಸ್ಯರು ಇದ್ದರು.





















