
ಬೀದರ್: ಅ.10:ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾದ ಬೆಳೆ ಹಾನಿ ಪರಿಹಾರಕ್ಕೆ ಓಂಕಾರ ಗ್ರೂಪ್ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 1 ಕೋಟಿ ದೇಣಿಗೆ ನೀಡಿದೆ.
ಭಾಲ್ಕಿ ಬಾಜೋಳಗಾದ ಓಂಕಾರ ಸಕ್ಕರೆ ಕಾರ್ಖಾನೆಯನ್ನೂ ಒಳಗೊಂಡ ಓಂಕಾರ ಗ್ರೂಪ್ ಅಧ್ಯಕ್ಷ ಬಾಬುರಾವ್ ಬೋತ್ರೆ ಪಾಟೀಲ,
ನಿರ್ದೇಶಕರಾದ ರೇಖಾತಾಯಿ ಬೋತ್ರೆ ಪಾಟೀಲ ಹಾಗೂ ಓಂರಾಜೆ ಬೋತ್ರೆ ಪಾಟೀಲ ಅವರು ಮುಂಬೈನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ದೇಣಿಗೆ ಚೆಕ್ ಹಸ್ತಾಂತರಿಸಿದರು.
ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಭಾರಿ ಮಳೆಯಿಂದಾಗಿ ಅನೇಕ ರೈತರು ತೊಂದರೆಯಲ್ಲಿದ್ದಾರೆ. ಅವರ ನೆರವಿಗಾಗಿ ದೇಣಿಗೆ ಕೊಡಲಾಗಿದೆ ಎಂದು ಬಾಬುರಾವ್ ಬೋತ್ರೆ ಪಾಟೀಲ ತಿಳಿಸಿದರು.
ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ಓಂಕಾರ ಗ್ರೂಪ್ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕಾರ್ಯಗಳಿಗೆ ನೆರವಾಗುತ್ತಾ ಬಂದಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ, ಅಜೀತ್ ದಾದಾ ಪವಾರ್, ಶಾಸಕರಾದ ದಾದಾ ಭೂಸೆ, ಪಂಕಜಾತಾಯಿ ಮುಂಡೆ, ಸಂಭಾಜಿರಾವ್ ಪಾಟೀಲ ನೀಲಂಗೆಕರ್, ಉದ್ಯಮಿ ಯಾಮಿನಿ ಪಾಟೀಲ ಮತ್ತಿತರರು ಇದ್ದರು.