ಭಾರತದ ಯೋಗ್ಯ ಬ್ರಹ್ಮಚಾರಿ ರಾಹುಲ್

ನವದೆಹಲಿ,ಅ.೨೧: ದೇಶದ ಪ್ರಮುಖ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೀಪಾವಳಿ ಸಂದರ್ಭದಲ್ಲಿ ಐತಿಹಾಸಿಕ ಘಂಟೇವಾಲಾ ಮಿಠಾಯಿ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಅಂಗಡಿಯ ಮಾಲೀಕ ಸುಶಾಂತ್ ಜೈನ್ ಅವರು ರಾಹುಲ್ ಗಾಂಧಿಯನ್ನು ಭಾರತದ “ಅತ್ಯಂತ ಯೋಗ್ಯ ಕುಲೀನ ಬ್ರಹ್ಮಚಾರಿ” ಎಂದು ಕರೆದು ಶೀಘ್ರ ವಿವಾಹವಾಗಬೇಕು ಎಂದು ಕೋರಿದ್ದಾರೆ.


ರಾಹುಲ್ ಗಾಂಧಿ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮಿಠಾಯಿ ಖರೀದಿಸಲು ಈ ಅಂಗಡಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ‘ಇಮರ್ತಿ ಮತ್ತು ‘ಬೇಸನ್ ಲಡ್ಡು’ ತಯಾರಿಸುವುದನ್ನು ಸ್ವತಃ ಪ್ರಯತ್ನಿಸಿದರು. ಅಂಗಡಿಯ ಮಾಲೀಕ ಸುಶಾಂತ್ ಜೈನ್ ರಾಹುಲ್ “ಅವರು ಬಂದಾಗ, ತಾವೇ ತಯಾರಿಸಿ ರುಚಿ ನೋಡುತ್ತೇನೆ ಎಂದು ಸಿಹಿ ತಯಾರಿಸಲು ರಾಹುಲ್‌ಗೆ ಆಹ್ವಾನ ನೀಡಿದರು.


ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿಗೆ ಇಮರ್ತಿ ಬಹಳ ಇಷ್ಟವಾಗಿತ್ತು. ಆದ್ದರಿಂದ ನಾನು ಸರ್, ನೀವು ಅದನ್ನು vಚಿಯಾರಿಸಲು ಪ್ರಯತ್ನಿಸಬಹುದು ಎಂದ ಅವರು ಇಮರ್ತಿ ತಯಾರಿಸಿದರು. ಬೇಸನ್ ಲಡ್ಡುಗಳೂ ಅವರಿಗೆ ಬಹಳ ಇಷ್ಟವಾದ ಕಾರಣದಿಂದ ಅವುಗಳನ್ನೂ ತಯಾರಿಸಿದರು,” ಎಂದು ವಿವರಣೆ ನೀಡಿದರು.
ಜೈನ್ ಅವರು ಮುಂದೆ, “ನಮ್ಮ ಅಂಗಡಿ ಬಹಳ ಕಾಲದಿಂದ ಗಾಂಧಿ ಕುಟುಂಬಕ್ಕೆ ಮಿಠಾಯಿ ಸರಬರಾಜು ಮಾಡುತ್ತಿದೆ. ‘ಸರ್, ನಿಮ್ಮ ಮದುವೆಯ ಸಿಹಿ ತಿಂಡಿಗಳ ಆರ್ಡರ್ ನೀಡಬೇಕೆಂದು ನಾವು ಕಾಯುತ್ತಿದ್ದೇವೆ’. ನೀವು ಭಾರತದ ಅತ್ಯಂತ ಯೋಗ್ಯ ಕುಲೀನ ಬ್ರಹ್ಮಚಾರಿ ಎಂದು ಹೇಳಿದರು.


ನಂತರ ರಾಹುಲ್ ಗಾಂಧಿ ತಮ್ಮ ‘ಘಿ’ (ಅದಾಜೂ ಟ್ವಿಟರ್) ಖಾತೆಯಲ್ಲಿ ಈ ಅನುಭವವನ್ನು ಶೇರ್ ಮಾಡಿದ್ದಾರೆ “ಪುರಾನಿ ದೆಹಲಿಯ ಪ್ರಸಿದ್ಧ ಮತ್ತು ಐತಿಹಾಸಿಕ ಘಂಟೇವಾಲಾ ಸಿಹಿತಿಂಡಿ ಅಂಗಡಿಯಲ್ಲಿ ಇಮರ್ತಿ ಮತ್ತು ಬೇಸನ್ ಲಡ್ಡು ಮಾಡುವ ಪ್ರಯತ್ನ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ.


ಈ ಶತಮಾನಗಳಷ್ಟು ಪುರಾತನ, ಪ್ರಸಿದ್ಧ ಅಂಗಡಿಯ ಸಿಹಿತನವು ಅದೇ ರೀತಿ ಉಳಿದಿದೆ – ಶುದ್ಧ, ಸಾಂಪ್ರದಾಯಿಕ ಮತ್ತು ಹೃದಯಂಗಮ,” ಎಂದು ಬರೆದರು.

ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಅವರು, “ಭಾರತವು ಸಂತೋಷದ ದೀಪಗಳಿಂದ ಪ್ರಕಾಶಿಸಲಿ, ಸಂತೋಷ, ಸಮೃದ್ಧಿ ಮತ್ತು ಪ್ರೇಮದ ಬೆಳಕು ಪ್ರತಿ ಮನೆಯಲ್ಲೂ ಹರಡಲಿ,” ಎಂದು ಜನತೆಗೆ ಶುಭಾಶಯ ಕೋರಿದ್ದಾರೆ.