
ಲಕ್ಷೇಶ್ವರ,ಮಾ.೩೦: ತಾಲೂಕ ಬಾಳೇಹೊಸೂರ ಶ್ರೀ ದಿಂಗಾಲೇಶ್ವರಮಠದಲ್ಲಿ ಏ.೭ ಮತ್ತು ೮ ರಂದು ನಡೆಯುತ್ತಿರುವ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ನಿತ್ಯ ಸಂಜೆ ಶ್ರೀಮಠದಲ್ಲಿ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭಗೊAಡಿತು.
ಪ್ರಾರAಭೋತ್ಸವ ನೆರವೇರಿಸಿದ ಆಂದ್ರಪ್ರದೇಶ ಉರವಕೊಂಡ ಉರಗಾದ್ರಿ ಸಂಸ್ಥಾನ ಗವಿಮಠದ ಡಾ.ಕರಿಬಸವ ರಾಜೇಂದ್ರ ಜಗದ್ಗುರುಗಳು ಆಶೀರ್ವಚನ ನೀಡಿದರು. ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ಮಾನವೀಯ ಮೌಲ್ಯಗಳಿಂದ ಕೂಡಿದ ಸುಸಂಸ್ಕೃ ಸಮಾಜ ನಿರ್ಮಾಣದಲ್ಲಿ ಪುರಾಣ-ಪುಣ್ಯಕಥೆ, ಧರ್ಮ ಜಾಗೃತಿ, ಸತ್ಸಂಗದAತಹ ಕಾರ್ಯಕ್ರಮಗಳು ಅವಶ್ಯ.
ಮಾನವ ತನ್ನ ಬದುಕಿನ ಜಂಜಾಟದ ಮದ್ಯೆಯೂ ಬದುಕು ಪವಿತ್ರಗೊಳಿಸಲು ಜೀವನದಲ್ಲಿ ಧರ್ಮ, ಆಧ್ಯಾತ್ಮ, ಪುರಾಣ ಸತ್ಸಂಗವನ್ನು ಅಳವಡಿಸಿಕೊಳ್ಳುವುದು, ಶರಣ-ಶರಣೆಯರ, ಮಹಾತ್ಮರ ಚರಿತ್ರೆಗಳನ್ನು ಆಲಿಸುವ ಮೂಲಕ ಸನ್ಮಾರ್ಗದತ್ತ ಸಾಗಬೇಕು ಎಂದರು.
ಶ್ರೀಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶ್ರೀದೇವಿ ಮಾತಾಜಿ ಪ್ರವಚನ ನೀಡಿದರು. ಹೊನ್ನಿಗನೂರಿನ ಶ್ರೀ ವಿರುಪಾಕ್ಷಶಾಸ್ತಿçಗಳು, ಈಶ್ವರಯ್ಯ ಮಾದಾಪುರಮಠ, ಅಶೋಕ ಮಾಗಿ, ರೇಣುಕಸ್ವಾಮಿ ವೆಂಕಟಾಪುರಮಠ ಸೇರಿ ಗ್ರಾಮದ ಹಿರಿಯರು, ಜಾತ್ರಾ ಸಮಿತಿಯವರು ಉಪಸ್ಥಿತರಿದ್ದರು. ಹುಬ್ಬಳ್ಳಿಯ ಪ್ರಭಾವತಿ ಹಿರೇಮಠ ನಿರೂಪಿಸಿದರು.
























