Home ಜಿಲ್ಲೆ ಕಲಬುರಗಿ ಸುಕಿ ಸ್ಟುಡಿಯೋದಲ್ಲಿ ಪುನೀತ್ ಹುಟ್ಟುಹಬ್ಬ

ಸುಕಿ ಸ್ಟುಡಿಯೋದಲ್ಲಿ ಪುನೀತ್ ಹುಟ್ಟುಹಬ್ಬ

ಕಲಬುರಗಿ,ಮಾ.25: ನಗರದ ಸುಕಿ ಸ್ಟುಡಿಯೋದಲ್ಲಿ ಸುಕಿ ಮೆಲೋಡಿಸ್ ಸಂಸ್ಥಾಪಕ ಕಿರಣ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಡಾ. ರಾಜಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 52 ನೇ ಹುಟ್ಟು ಹಬ್ಬದ ಸವಿನೆನಪಿನ ಪ್ರಯುಕ್ತ ಪುನೀತ್ ರಾಜಕುಮಾರ ಅವರ ಗುಣಗಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿಯ ಹಿರಿಯ ಗಾಯಕರಾದ ಸುರೇಶ್ ಕೂಟಗಿ, ಗುರುರಾಜ ಕುಲಕರಣಿ,ಕಾವೇರಿ ಹಿರೇಮಠ್,ಅನ್ನಪೂರ್ಣ ಚೌಹಾಣ,ಸಾಗರ್ ವಾಗ್ಮೋರೆ ಮೊದಲಾದ ಕಲಾವಿದರು ಹಾಡುಗಳನ್ನು ಹಾಡಿದರು. ದತ್ತು ಉದಯಕರ್, ಸಾಗರ್ ಪೂಜಾರಿ ಉಪಸ್ಥಿತರಿದ್ದರು.