
ಬೆಂಗಳೂರು.ಅ೧೮:ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿರುವ ಗಾಂಧಿ ಚೌಕದಲ್ಲಿ ಅಂಚೆ ಇಲಾಖೆಯಿಂದ ನಿಶ್ಚಿತ ಠೇವಣಿಯ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಂಚೆ ಇಲಾಖೆಯ ವ್ಯವಸ್ಥಾಪಕರಾದ ಹರೀಶ್ ರವರು ಮಾತನಾಡುತ್ತಾ ಉಳಿತಾಯ ಖಾತೆ: ಕನಿಷ್ಠ ರೂ.೫೦೦ ಠೇವಣಿ ಇರಿಸಿ ಮತ್ತು ಎಟಿಎಂ ಸೌಲಭ್ಯ ಪಡೆಯಿರಿ.
ರೂ.೧೦,೦೦೦ ವರೆಗಿನ ಠೇವಣಿಗೆ ಶೇಕಡಾ ೪ರಷ್ಟು ಬಡ್ಡಿ ಸಿಗುತ್ತದೆ ಮತ್ತು ತೆರಿಗೆ ಮುಕ್ತವಾಗಿರುತ್ತದೆ. ಆವರ್ತ ಠೇವಣಿ (ಆರ್‌ಡಿ): ಸಣ್ಣ ಮೊತ್ತದಿಂದ ಸ್ಥಿರ ಆದಾಯ ಪಡೆಯಲು ಉತ್ತಮ ಆಯ್ಕೆ. ಮಾಸಿಕ ಆದಾಯ ಯೋಜನೆ (ಎಂಐಎಸ್): ಮಾಸಿಕ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಉತ್ತಮ ಬಡ್ಡಿ ದರ (೭.೧ %) ನೀಡುತ್ತದೆ ಮತ್ತು ತೆರಿಗೆ ವಿನಾಯಿತಿ ಸೌಲಭ್ಯ ಹೊಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ): ಹೆಣ್ಣು ಮಕ್ಕಳಿಗಾಗಿ ಇರುವ ಉಳಿತಾಯ ಯೋಜನೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ): ರಾಷ್ಟ್ರೀಯ ಉಳಿತಾಯ ಪತ್ರದಂತಹ ಉಳಿತಾಯ ಯೋಜನೆ. ಅಂಚೆ ಕಚೇರಿ ಟೈಮ್ ಠೇವಣಿ (ಟಿಡಿ): ೧ ರಿಂದ ೫ ವರ್ಷಗಳ ಅವಧಿಗೆ ಠೇವಣಿ ಇಡಬಹುದು ಮತ್ತು ಬಡ್ಡಿ ಪಡೆಯಬಹುದು. ಎಂದು ತಿಳಿಸಿದರು.
ಅಭಿಯಾನ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಚೇತನ್, ಜನಾರ್ಧನ್, ವೆಂಕಟೇಶ್, ಗೌತಮ್, ವರ್ಷ, ಭವಿತಾ, ಶಕುಂತಲಮ್ಮ , ಕಾವೇರಿ, ದಂಡಿಗಾನಹಳ್ಳಿ ರಘು, ಏರ್ಪೋರ್ಟ್ ರವಿ ರವರು ಉಪಸ್ಥಿತರಿದ್ದರು.