ರಸ್ತೆ ಅಪಘಾತ ಕಡಿಮೆ ಮಾಡಲು ಜನರ ಸಹಭಾಗಿತ್ವ ಅಗತ್ಯ: ಪೊಲೀಸ್ ಆಯುಕ್ತ ಶರಣಪ್ಪ

ಕಲಬುರಗಿ: ಜ 30:ರಸ್ತೆ ಸುರಕ್ಷತೆ ಕೇವಲ ಕಾನೂನು ಜಾರಿಗೆ ಮಾತ್ರ ಸೀಮಿತವಾಗಿರಬಾರದು. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಜನರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ ಎಂದು ಕಲಬುರಗಿ ಪೆÇಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಅವರು ಹೇಳಿದರು.

ನಗರದ ಎಸ್.ವಿ.ಪಿ ವೃತ್ತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪದ ಅಂಗವಾಗಿ ಕಲಬುರಗಿ ನಗರ ಪೆÇಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಪೆÇಲೀಸರ ಜವಾಬ್ದಾರಿಯಷ್ಟೇ ಅಲ್ಲ, ಸಾರ್ವಜನಿಕರ ಸಾಮಾಜಿಕ ಹೊಣೆಗಾರಿಕೆಯೂ ಹೌದು ಎಂದು ಸ್ಪಷ್ಟಪಡಿಸಿದರು.

“ಪೆÇಲೀಸರು ಮಾತ್ರ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನೂ ಸ್ವಯಂ ಪ್ರೇರಿತವಾಗಿ ಸುರಕ್ಷಿತ ಚಾಲನಾ ಕ್ರಮಗಳನ್ನು ಅಳವಡಿಸಿಕೊಂಡು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೆÇಲೀಸ್ ಮತ್ತು ಸಾರ್ವಜನಿಕರ ಸಂಯುಕ್ತ ಪ್ರಯತ್ನದಿಂದಲೇ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ,” ಎಂದು ಹೇಳಿದರು.

ಪ್ರತಿ ವರ್ಷ ಜನವರಿ ತಿಂಗಳಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಯುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಕಾಣಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ ಅವರು ಇನ್ನು ಮುಂದಾದರೂ ರಸ್ತೆ ನಿಯಮಗಳನ್ನು ಪಾಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. “ಪ್ರತಿ ವರ್ಷ ಹೊಸ ಚಾಲಕರು ರಸ್ತೆ ಸಂಚಾರಕ್ಕೆ ಸೇರುತ್ತಿದ್ದಾರೆ. ಆದರೆ ಹಳೆಯ ಚಾಲಕರು ನಿಯಮ ಪಾಲನೆಗೆ ನಿರ್ಲಕ್ಷ್ಯ ತೋರಿಸುವುದು ಮುಂದುವರೆದಿದೆ. ನಮ್ಮ ಅಜಾಗರೂಕತೆ ನಮ್ಮ ಜೀವಕ್ಕೂ, ಇತರರ ಜೀವಕ್ಕೂ ಕುತ್ತು ತರಬಹುದು ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬಹುತೇಕ ಎಲ್ಲಾ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು,” ಎಂದರು.

ರಸ್ತೆಯನ್ನು ಬಳಸುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು ಎಂದು ಪ್ರತಿಪಾದಿಸಿದ ಅವರು ಶರಣಪ್ಪ ಅವರು ರಸ್ತೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡರೆ ಅಮೂಲ್ಯ ಜೀವಗಳನ್ನು ಉಳಿಸಬಹುದು,” ಎಂದು ಅವರು ಹೇಳಿದರು.

2026ನೇ ವರ್ಷವನ್ನು ಕೇವಲ ಜಾಗೃತಿ ವರ್ಷವಲ್ಲ, ‘ಕಾರ್ಯಾಚರಣೆಯ ವರ್ಷವಾಗಗಿ’ ರೂಪಿಸಲಾಗುವುದು ಎಂದು ಪೆÇಲೀಸ್ ಆಯುಕ್ತರು ಘೋಷಿಸಿದರು. “ಈ ವರ್ಷ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಉಪದೇಶದಿಂದ ಕಾರ್ಯಾಚರಣೆಯತ್ತ ನಿರ್ಣಾಯಕ ಬದಲಾವಣೆ ಈ ವರ್ಷ ಕಾಣಲಿದೆ,” ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಯುನೈಟೆಡ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಮುಖ್ಯಸ್ಥ ಡಾ. ಅಬ್ದುಲ್ ಹಕೀಮ್ ಅವರು, ಅಪಘಾತಗಳಿಗೆ ಕಾರಣ ಅಜ್ಞಾನವಲ್ಲ, ನಿಯಮಗಳು ತಿಳಿದಿದ್ದರೂ ಪಾಲಿಸದಿರುವ ಮನೋಭಾವನೆ ಎಂದರು. “ರಸ್ತೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಜನರಿಗೆ ಗೊತ್ತಿದೆ. ಆದರೆ ಅದನ್ನು ಪಾಲಿಸುವ ಮನಸ್ಸಿಲ್ಲ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ಪೆÇಲೀಸ್ ಆಯುಕ್ತ ಪ್ರವಿ?ಣ್ ಎಚ್. ನಾಯಕ್, ಸಹಾಯಕ ಪೆÇಲೀಸ್ ಆಯುಕ್ತರಾದ ಶರಣಬಸಪ್ಪ ಸುಬೇದಾರ್ ಹಾಗೂ ಸುಧಾ ಆದಿ ಮತ್ತು ಸಂಚಾರ ವಿಭಾಗ-1 ಮತ್ತು 2ರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಯುನೈಟೆಡ್ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗೆ ಹೆಲ್ಮೆಟ್ ಹಾಗೂ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ವಿತರಿಸಲಾಯಿತು.

ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗಾವಾಗಿ ಇಡೀ ತಿಂಗಳಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದೂ ಅಫಘಾತ ಮಾಡದೆ ಜಾಗರೂಕವಾಗಿ ಬಸ್ ಚಾಲನೆ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಐವರು ಚಾಲಕರಿಗೆ ಯುನೈಟೆಡ್ ಆಸ್ಪತ್ರೆ ಮತ್ತು ಪೆÇಲೀಸ್ ಇಲಾಖೆ ಸನ್ಮಾನ ಮಾಡಿತ್ತು. ಅಲ್ಲದೆ, ಪೆÇಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ವಿವಿಧ ಸಂದರ್ಭಗಳಲ್ಲಿ ಹೆಲ್ಮೆಟ್ ಹಾಗೂ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನೂ ವಿತರಿಸಲಾಗಿತ್ತು.