Home ಜಿಲ್ಲೆ ಕಲಬುರಗಿ ಖಾತಾ ನಕಲು ವಿತರಣೆ ವಿಳಂಬ ಸಾರ್ವಜನಿಕರ ಆಕ್ರೋಶ

ಖಾತಾ ನಕಲು ವಿತರಣೆ ವಿಳಂಬ ಸಾರ್ವಜನಿಕರ ಆಕ್ರೋಶ

ವಾಡಿ:ಮಾ.12: ಆಸ್ತಿಗೆ ಸಂಬಂಧ ಪಟ್ಟ ಖಾತ ನಕಲು, ಮುಟೇಶನ ದಾಖಲೆಗಳು ಸಕಾಲದಲ್ಲಿ ನೀಡಲಾಗುತ್ತಿಲ್ಲ,ಹಣ ಪಡೆದು ಪುರಸಭೆ ಅಧಿಕಾರಿಗಳು ದಾಖಲೆಗಳು ನೀಡಲು ವರ್ಷಾನುಗಟ್ಟಲೆ ಅಲೇದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ತಹಶೀಲ್ದಾರ ಎದಿರು ತಮ್ಮ ಅಳಲು ತೋಡಿಕೊಂಡರು.

ಬುಧವಾರ ಪುರಸಭೆ ಕಚೇರಿಗೆ ಭೇಟಿನೀಡಿದ್ದ ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ ಅವರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪುರಸಭೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು. ಖಾತಾ ನಕಲು, ಮುಟೇಶನ್ ಮಾಡಿಕೋಡಲು ವರ್ಷಾನುಗಟ್ಟಲೆ ಅಲೆದಾಡಿ ಸುತ್ತಾರೆ. ದಾಖಲೆಗಳನ್ನು ನೀಡಲು ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಜು ನಾಯಕ್. ಪರ್ವೀನ್ ಸುಳೆ. ರಮೇಶ್ ಜಾಧವ್. ರಾಜೇಶ್ ಕಾಂಬಳೆ. ಗಣೇಶ್ ಜಾದವ್. ಅಲ್ತಾಫ್. ಹಣಮಂತ ಮೈತ್ರಿ ಆರೋಪಿಸಿದ್ದರು.

” ವಾಡಿ ಪುರಸಭೆ ಕಚೇರಿಯಲ್ಲಿ ಖಾತ ನಕಲು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದೆ”
ನಾಗಯ್ಯ ಹಿರೇಮಠ ತಹಶೀಲ್ದಾರರು ಚಿತ್ತಾಪುರ.